ಗೊಂದಲ ಮುಕ್ತ ಗ್ಯಾರಂಟಿ ಅನುಷ್ಠಾನ ಸಾಧ್ಯವೇ ಇಲ್ಲ ಅನ್ನೋದಂತು ದಿನದಿಂದ ದಿನಕ್ಕೆ ಕನ್ಫರ್ಮ್ ಆಗುತ್ತಿದೆ.ಅದರಲ್ಲೂ ಇರೋ 5 ಗ್ಯಾರಂಟಿಗೆ ಪ್ರತಿದಿನ ಬದಲಾಗುತ್ತಿರುವ ಷರತ್ತುಗಳನ್ನು ನೋಡಿ ಜನ ಕೊನೆಗೆ ತಮಗೆ ಏನ್ ಸಿಗುತ್ತೆ ಅನ್ನೋದೆ ಗೊತ್ತಾಗದೆ ಸಿಡಿದೇಳ್ತಿದ್ದಾರೆ.

ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆಯು ಗೊಂದಲದ ಗೂಡಾದಂತಿದೆ. ಇವತ್ತು ಸಿಎಂ ಸಿದ್ದರಾಮಯ್ಯ ಸಭೆ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ನೀಡಿದ ಹೇಳಿಕೆ ಜನರನ್ನ ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.

ಹೌದು, ಸಿಎಂ ಸಭೆ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಗಂಡ ಅಥವಾ ಮಕ್ಕಳು ತೆರಿಗೆ ಪಾವತಿಸಿದರೆ ಮನೆಯೊಡತಿಗೆ ಗೃಹಲಕ್ಷ್ಮಿ ಸೌಲಭ್ಯವಿಲ್ಲ. ಟ್ಯಾಕ್ಸ್ ಪೇಯರ್ಸ್‌ಗೆ ಈ ಸೌಲಭ್ಯವಿಲ್ಲ ಅಂತ ಹೇಳಿದ್ದೇವೆ. ಯಾರಿಗೆ ಉಪಯೋಗ ಆಗಬೇಕೋ ಅವರಿಗೆ ಯೋಜನೆ ಸಿಗಲಿದೆ ಎಂದು ಹೇಳಿದರು.

ಬಿಪಿಎಲ್ ಕಾರ್ಡ್‌ರಹಿತ ಮಹಿಳೆಯರು ಯೋಜನೆ ಪಡೆಯುವ ಆಗಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಮುಂದಿನ ದಿನಗಳಲ್ಲಿ ಅವರನ್ನು ಕೂಡ ಪರಿಗಣಿಸುತ್ತೇವೆ. ಕೆಲವರು ಈಗ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರ ಬಳಿ ಬಿಪಿಎಲ್ ಕಾರ್ಡ್ ಇಲ್ಲ, ಅಧಿಕಾರಿಗಳಿಗೆ ಅರ್ಜಿಯನ್ನು ಸುಖಾಸುಮ್ಮನೆ ತಿರಸ್ಕರಿಸುವಂತಿಲ್ಲ ಅಂತ ಕೂಡ ಸೂಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಗೊಂದಲದ ನಡುವೆಯೇ ತಿಂಗಳಿಗೆ ಸರ್ಕಾರದಿಂದ ನಿಮಗೆ 2000 ಬರಬೇಕು ಅಂದರೆ ನೀವೂ ಈ ಕಂಡೀಷನ್​ಗಳ ಪಟ್ಟಿಯನ್ನ ಅನುಸರಿಸಲೇ ಬೇಕು. ತೆರಿಗೆ ಪಾವತಿ ಮಾಡೋರಿಗೆ ಸೌಲಭ್ಯ ಸಿಗೋದಿಲ್ಲ, ಮಹಿಳೆ ಪತಿ ತೆರಿಗೆ ಪಾವತಿಸುತ್ತಿದ್ದರೂ ಪತ್ನಿಗೆ ಸಿಗಲ್ಲ, ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ ತಾಯಿಗೆ ಸೌಲಭ್ಯ ಸಿಗೋದಿಲ್ಲ, ಜಿಎಸ್‌ಟಿ ತೆರಿಗೆ ಪಾವತಿದಾರರಿಗೂ ಯೋಜನೆ ಇಲ್ಲ, ಕುಟುಂಬದಲ್ಲಿ ತೆರಿಗೆ ಪಾವತಿದಾರರಿದ್ದಲ್ಲಿ ಸಿಗಲ್ಲ ಎಂಬ ಷರತ್ತುಗಳನ್ನು ಮುಂದಿಟ್ಟಿದೆ.

ಇಷ್ಟೆಲ್ಲಾ ಗೊಂದಲ ಗಲಾಟೆ ನಡುವೆ ಗ್ಯಾರಂಟಿ ಅಧಿಕೃತ ಪ್ರಾರಂಭಕ್ಕೆ ದಿನಾಂಕ ನಿಗದೆಯಾದಿಗೆ. ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಗೃಹ ಜ್ಯೋತಿಗೆ ಜೂನ್ 15ರಿಂದ ನೋಂದಣಿ ಶುರು, ಆ.1ರಂದು ಕಲಬುರಗಿಯಲ್ಲಿ ಗೃಹಜ್ಯೋತಿಗೆ ಚಾಲನೆ ನೀಡಲಾಗುತ್ತೆ. ಈ ಯೋಜನೆಗೆ ಆಧಾರ್‌, RR ನಂಬರ್, ಕರಾರು ಪತ್ರ ಕಡ್ಡಾಯ.

ಇನ್ನು ಆ.17 ಅಥವಾ 18ರಂದು ‘ಗೃಹಲಕ್ಷ್ಮೀ’ಗೆ ಚಾಲನೆ ಸಿಗಲಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯ ತವರು ಬೆಳಗಾವಿಯಲ್ಲಿ ‘ಗೃಹಲಕ್ಷ್ಮೀ’ಗೆ ಚಾಲನೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ರಾಜ್ಯದ 85% ಕುಟುಂಬಗಳಿಗೆ ಗೃಹಲಕ್ಷ್ಮಿ ಲಾಭ ಸಿಗಲಿದೆ ಅನ್ನೋದನ್ನು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *