ಅರೇಹಳ್ಳಿ ಹೋಬಳಿಯ ಹೊಸಮನೆ ಗ್ರಾಮದಲ್ಲಿ ಮಂಜೇಗೌಡ ಎಂಬುವವರ ಮೇಲೆ ಕಾಡಾನೆ ದಾಳಿ.ಮನೆಯಿಂದ ಆಚೆಗೆ ಬಂದ ವೃದ್ಧನನ್ನು ಕಾಡಾನೆ ಗಾಯಗೊಳಿಸಿದ ಘಟನೆ ಅರೇಹಳ್ಳಿ ಹೊಬಳಿಯ ಹೊಸಮನೆ ಗ್ರಾಮದಲ್ಲಿ ಶನಿವಾರ ರಾತ್ರಿ 9.45ಕ್ಕೆ ಸಂಭವಿಸಿದೆ. ಮಾಜಿ ಬಿಜೆಪಿ ಹೋಬಳಿ ಅಧ್ಯಕ್ಷ ಶಿವಕುಮಾರ್ ರಾಜ್ ಅರಸ್(ಮಂಜೇಗೌಡ-70) ಆನೆಯ ದಾಳಿಗೆ ಸಿಕ್ಕಿ ಗಾಯಗೊಂಡ ವೃದ್ಧರಾಗಿದ್ದಾರೆ. ಮನೆಯ ಬಳಿ ಇದ್ದಕಿದ್ದಂತೆ ನಾಯಿಗಳು ಬೊಗೊಳುತ್ತಿದ್ದ ಶಬ್ಧ ಕೇಳಿ ದನಗಳು ಇರಬಹುದೆಂದು ಊಹಿಸಿ ಮನೆಯಿಂದ ಆಚೆಬಂದ ಶಿವಕುಮಾರ್ ಅರಸ್ ರವರನ್ನು ಆನೆಯು ಏಕಾಏಕಿ ಸೊಂಡಿಲಿನಿಂದ 10 ಅಡಿಯಷ್ಟು ದೂರ ತಳ್ಳಿದೆ. ನಂತರ ಆನೆಯು ಕೆಳಗೆ ಬಿದ್ದ ವೃದ್ಧನ ಮೇಲೆ ಕಾಲಿಟ್ಟು ಇನ್ನೇನೂ ಸಾಯಿಸಬೇಕು ಎನ್ನುವಷ್ಟರಲ್ಲಿ ಮನೆಯೊಳಗಿದ್ದ ಸದಸ್ಯರು ತಕ್ಷಣ ಹೊರಬಂದು ಕಿರುಚಾಡಲು ಆರಂಭಿಸಿದಾಗ ಆನೆ ವೃದ್ಧನನ್ನು ಜೀವಂತವಾಗಿ ಬಿಟ್ಟು ಅಲ್ಲಿಂದ ಹೋಗಿದೆ. ಆನೆಯ ದಾಳಿಯಿಂದ ಗಾಯಗೊಂಡ ವೃದ್ಧರನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. �

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *