ಸಕಲೇಶಪುರ ತಾಲ್ಲೂಕಿನಾದ್ಯಂತ ಹೆಗ್ಗಿಲ್ಲದೆ ನೆಡೆಯುತ್ತಿರುವ ಗೋ ಕಳತನ ಹಾಗೂ ರಾತ್ರಿ ವೇಳೆ ಕಸಾಯಿಖಾನೆಗೆ ಅಕ್ರಮ ಗೋ ಗಳ ಸಾಗಾಣೆ ಇದಕ್ಕೆ ಮುಕ್ತಿ ಯಾವಾಗ……??? ಸಕಲೇಶಪುರ – ನೆನ್ನೆ ತಡರಾತ್ರಿ ಶೆಟ್ಟಿಹಳ್ಳಿಯಿಂದ ಅಕ್ರಮವಾಗಿ ಗೋಸಾಗಾಟ ಮಾಡುವ ಮಾಹಿತಿ ಪಡೆದಿದ್ದ ಶುಕ್ರವಾರಸಂತೆ – ಶೆಟ್ಟಿಹಳ್ಳಿ – ಕೆರೋಡಿ ಗ್ರಾಮದ ಬಜರಂಗದಳ ಕಾರ್ಯಕರ್ತರು ರಾತ್ರಿ ಕಾರ್ಯಾಚರಣೆಯಲ್ಲಿದ್ದರು ಈ ಸಂದರ್ಭದಲ್ಲಿ KA 46 3830 TataAc ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ವೇಗವಾಗಿ ವಾಹನ ಚಾಲನಾ ಮಾಡಿಕೊಂಡು ಮಾಗಲು ರಸ್ತೆಯ ಮುಖಾಂತರ ಹಾಸನ ಭಾಗಕ್ಕೆ ಹೋಗಿದ್ದು ಬೆನ್ನ್-ಬಿಡದ ಕಾರ್ಯಕರ್ತರು TataAc ವಾಹನವನ್ನು ಕಾಗನೂರಿನಲ್ಲಿ ಅಡ್ಡಗಟ್ಟಲು ಯಶಸ್ವಿಯಾಗಿದ್ದಾರೆ. TataAc ವಾಹನದಲ್ಲಿ ಬೇರೊಬ್ಬರಿ 5 ಗೋವುಗಳನ್ನು ಕ್ಲಿಷ್ಟಕರವಾದ ರೀತಿಯಲ್ಲಿ ಕಟ್ಟಿದ್ದು ಮಾಗಲು ಗ್ರಾಮದಲ್ಲಿ ವಾಹನವನ್ನು ನಿಲ್ಲಿಸದ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಹೋಗಿದ್ದಾನೆ‌. ಠಾಣಾ ಸರಹದ್ದು ದಾಟಿ ಆಲೂರು ಠಾಣಾ ವ್ಯಾಪ್ತಿಯಲ್ಲಿ TataAc ಇದ್ದ ಕಾರಣ ಆಲೂರು ಠಾಣಾ ವೃತ್ತ ನಿರೀಕ್ಷಕರಿಗೆ ವಿಚಾರ ತಿಳಿಸಿ. ರಾತ್ರಿಗಸ್ತು ವಾಹನ 112 ಗೆ ಕರೆಮಾಡಿ ತಿಳಿಸಿ. ನಂತರ ಕೆಂಚಮ್ಮನ ಹೊಸಕೋಟೆ ಬಳಿ ಇರುವ ಗ್ರಾಮಾಂತರ ಚೆಕ್ ಪೋಸ್ಟ್’ಗೆ ವಾಹನ ಹಾಗೂ ಗೋಹಂತಕರನ್ನು ಠಾಣಾ ಸುಪರ್ದಿಗೆ ಒಪ್ಪಿಸಿ ಬರಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *