
ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ ಹೊರಡಿಸುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್ ನೀಡಿದೆ.ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿಗೆ ನ್ಯಾಯಾಲಯ ಆಘಾತ ನೀಡಿದ್ದು, ರೆಡ್ಡಿ ದಂಪತಿ ಒಡೆತನದ 2009ರ ಜನವರಿ ನಂತರ ಖರೀದಿ ಮಾಡಿದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.ಅರುಣಾ ಲಕ್ಷ್ಮೀ ಹೆಸರಲ್ಲಿ 75ಕ್ಕೂ ಅಧಿಕ ಆಸ್ತಿಗಳಿವೆ. ಬೆಂಗಳೂರು, ಬಳ್ಳಾರಿ ಹಾಗೂ ಆಂಧ್ರದಲ್ಲಿ ರೆಡ್ಡಿ ದಂಪತಿ ಆಸ್ತಿ ಮಾಡಿದ್ದಾರೆ. ಇದೀಗ ರೆಡ್ಡಿ ದಂಪತಿ ಒಡೆತನದ ನೂರಕ್ಕೂ ಅಧಿಕ ಆಸ್ತಿಗಳನ್ನು ಜಪ್ತಿ ಮಾಡುವಂತೆ ನ್ಯಾಯಾಧೀಶ ಜಯಂತ್ ಕುಮಾರ್ ಅವರು ಆದೇಶ ಮಾಡಿದ್ದಾರೆ.
