
ಸಪ್ತ ಮಾತೃಕೆಯಲ್ಲಿ ಒಂದಾದ ಶ್ರೀ ಕೆಂಚಾಂಬ ದೇವಾಲಯಕ್ಕೆ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಬೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆದರು.ಶ್ರೀ ಕೆಂಚಾಂಬ ದೇವಾಲಯದ ಪ್ರಧಾನ ಅರ್ಚಕ ರಾಮಸ್ವಾಮಿ ಮಾತನಾಡಿ ಸಿಮೆಂಟ್ ಮಂಜು ಅವರು ಸ್ಥಳಿಯರಾಗಿರುವುದರಿಂದ ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದೆ ಅವರು ಶಾಸಕರಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ ಈ ಭಾಗದ ಜನರು ಮಾಗಲು- ಶುಕ್ರವಾರಸಂತೆ ಮೂಲಕ ಸಕಲೇಶಪುರ ತಲುಪಬೇಕಾದರೆ ಸುಮಾರು 25 ಕಿ.ಲೋ.ಮೀಟರ್ ಕ್ರಮಿಸಬೇಕಾಗಿದೆ ದೇವಾಲಯದ ಪಕ್ಕದಲ್ಲಿ ಹಾದು ಹೋಗಿರುವ ಹಳ್ಳಿಬೈಲು ರಸ್ತೆ ಮಳೆಗಾಲದಲ್ಲಿ ಹೇಮಾವತಿ ಹಿನ್ನೀರಿನಿಂದ ಸಂಪೂರ್ಣವಾಗಿ ಮಚ್ಚಿ ಹೋಗುತ್ತದೆ ಈ ರಸ್ತೆಗೆ ಸೇತುವೆ ನಿರ್ಮಾಣ ಮಾಡಿ ರಸ್ತೆ ದುರಸ್ತಿ ಪಡಿಸಿದರೆ ಸಕಲೇಶಪುರಕ್ಕೆ ಕೇವಲ ಹತ್ತು-ಹನ್ನೆರಡು ಕಿ.ಲೋ.ಮೀಟರ್ ರಸ್ತೆ ಕ್ರಮಿಸಬಹುದು ಇದರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೂ ಅನುಕೂಲವಾಗುತ್ತದೆ ಅದ್ದರಿಂದ ಶಾಸಕರು ಈ ಭಾಗದ ಜನರ ಅನುಕೂಲಕ್ಕಾಗಿ ರಸ್ತೆ ದುರಸ್ತಿಪಡಿಸಲು ಮುಂದಾಗಬೇಕು ಎಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು ಶ್ರೀ ಕೆಂಚಾಂಬ ದೇವಿ ರಾಜ್ಯದ್ಯಂತ ಅಪಾರ ಭಕ್ತಾದಿಗಳನ್ನು ಹೊಂದಿದ್ದು ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಬರುತ್ತಿದ್ದಾರೆ ಇದು ನನ್ನ ಗಮನದಲ್ಲಿದ್ದು ಜನಸಾಮಾನ್ಯರ ಹಿತದೃಷ್ಟಿಯಿಂದ ಪ್ರಧಾನ ಅರ್ಚಕರು ಹಳ್ಳಿಬೈಲು ರಸ್ತೆ ದುರಸ್ತಿ ಮಾಡಿಸಿಕೋಡಬೇಕು ಮನವಿ ಪತ್ರ ನೀಡಿದ್ದಾರೆ ಈ ರಸ್ತೆ ತುಂಬಾ ಹಳೆಯದಾಗಿದ್ದು ಈ ರಸ್ತೆಯ ಮೂಲಕ ಈ ಭಾಗದ ಜನರು ಶುಕ್ರವಾರಸಂತೆ,ಸಕಲೇಶಪುರ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳುತ್ತಿದ್ದರು ಒಂದು ಕಾಲದಲ್ಲಿ ಈ ರಸ್ತೆ ತುಂಬಾ ಉಪಯುಕ್ತವಾಗಿತ್ತು ಹೇಮಾವತಿ ಹಿನ್ನೀರು ಹೆಚ್ಚು ಒದುವು ಇರುವುದರಿಂದ ಮಳೆಗಾಲದಲ್ಲಿ ಮುಚ್ಚಿ ಹೋಗುತ್ತದೆ ಈ ರಸ್ತೆಯನ್ನ ಹೊಸದಾಗಿ ನಿರ್ಮಾಣ ಮಾಡಬೇಕಾಗುತ್ತದೆ ಅದ್ದರಿಂದ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿ ರಸ್ತೆ ಮಾಡುವ ಬಗ್ಗೆ ಗಮನಹರಿಸುತ್ತೇನೆ ಇನ್ನೂ ದೇವಾಲಯದ ಅಭಿವೃದ್ಧಿಗೆ ನನ್ನ ಗುರುಗಳಾದ ಬಿ.ಬಿ.ಶಿವಪ್ಪ ಸೇರಿದಂತೆ ಎಲ್ಲಾ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ ಅವರ ದಾರಿಯಲ್ಲಿ ನಾನು ಕೂಡ ಸಮಿತಿ ಪದಾಧಿಕಾರಿಗಳ ಜೊತೆ ಸಂಪೂರ್ಣ ಸಹಕಾರ ನೀಡುತ್ತಾ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರಾಮಸ್ವಾಮಿ, ದೇವಸ್ಥಾನ ಕಮಿಟಿ ಅಧ್ಯಕ್ಷ ರಘು ಹರಿಹಳ್ಳಿ,ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಉದಯಕುಮಾರ್,ಪ್ರದೀಪ್ ಟೆಂಪಲ್,ಅಶೋಕ್ ಕೆ.ಹೊಸಕೋಟೆ,ಕಮಿಟಿ ಸದಸ್ಯ ರವಿ ಹಾಗೂ ಇತರರು ಇದ್ದರು.
