ಸಕಲೇಶಪುರ : ಹಾನುಬಾಳು ಕ್ಲಷ್ಟರ್ ಮಟ್ಟದ FLN ಆಧಾರಿತ ಕಲಿಕಾ ಹಬ್ಬ 2024-25 ಹಾನುಬಾಳು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಆವರಣದಲ್ಲಿ,ದಿ=13-02-24 ರಂದು, ಕ್ಲಷ್ಟರ್ ಮಟ್ಟದ ವಿಧ್ಯಾರ್ಥಿಗಳ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಷ್ಟರ್ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ, ಸಭೆಯ ಅಧ್ಯಕ್ಷತೆಯನ್ನು,ಹಾನುಬಾಳು ಕೆ, ಪಿ,ಎಸ್ ಶಾಲಾ ಎಸ್ ,ಡಿ,ಎಂ,ಸಿ ಅಧ್ಯಕ್ಷರಾದ ಅರುಣ್ ಹೆಚ್ .ಕೆ.ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಕಲೇಶಪುರ ತಾಲ್ಲೂಕ್ ಕ್ಷೇತ್ರಶಿಕ್ಷಣಾಧಿಕಾರಿಗಳಾದ, ಲೋಕೇಶ್.ಬಿ. ಬಾಗವಹಿಸಿದ್ದರು. ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ, ಸಂತೋಷ್ .ಕೆ.ಆರ್. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್.ಹೆಚ್.ಎಸ್. ಎಸ್,ಡಿ,ಎಂ,ಸಿ ಉಪಾಧ್ಯಕ್ಷರಾದ, ಎಂ.ಬಿ. ರೆಹಮಾನ್, ಸದಸ್ಯರಾದ ಮಂಜುನಾಥ್, ಅನಿಲ್ ಮತ್ತು ಪ್ರಶಸ್ತಿ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಹಾಗೂ ಇಲಾಖೆಯ ಪರವಾಗಿ ಸಮೂಹ ಸಮನ್ವಯಾಧಿಕಾರಿಗಳಾದ ಗಂಗಾಧರ್ ರವರು,ತಾ, ಸಂಪನ್ಮೂಲ ಅಧಿಕಾರಿ ಗಳಾದ ಮಲ್ಲೇಶ್ ರವರು, ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ವನಜಾಕ್ಷಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಲಷ್ಟರ್ ಸಂಪನ್ಮೂಲ ಅಧಿಕಾರಿಗಳಾದ,ಶ್ರೀ ಜಗದೀಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಎಲ್ಲಾ ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿ ಯಶಸ್ವಿ ಗೊಳಿಸಿದರು. ಸಮಾರಂಭದಲ್ಲಿ ಭಾಗಿಯಾದ ಅತಿಥಿಗಳನ್ನು ಇಲಾಖೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *