ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ಈ ಮೂಲಕ ಭಾರತ ಕ್ರಿಕೆಟ್​ ತಂಡ ಫೈನಲ್​ಗೆ ಎಂಟ್ರಿ ನೀಡಿದೆ.ಇನ್ನು, ಆಸೀಸ್​ ನೀಡಿದ ಸಾಧಾರಣ ರನ್​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಪರ ಶುಭ್ಮನ್​ ಗಿಲ್​​ ಇನ್ನಿಂಗ್ಸ್​ ಶುರು ಮಾಡಿದರು.

ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​​ ಗಿಲ್​ ಸಿಕ್ಕ ಸುವರ್ಣಾವಕಾಶ ಕೈಚೆಲ್ಲಿದರು.

ಇಂದು ನಡೆದ ಸೆಮಿಫೈನಲ್​​ ಪಂದ್ಯದಲ್ಲಿ ಕೇವಲ 8 ರನ್​ಗೆ ಔಟಾಗಿದ್ದಾರೆ.ಮತ್ತೊಂದೆಡೆ ಕ್ಯಾಪ್ಟನ್​ ರೋಹಿತ್​ ಶರ್ಮಾ 28 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಶುಭ್ಮನ್​ ಗಿಲ್​ ವಿಕೆಟ್​ ಬಿದ್ದ ನಂತರ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿದ್ರು. ಆಸ್ಟ್ರೇಲಿಯಾ ತಂಡದ ಬೌಲರ್​ಗಳನ್ನು ಕಾಡಿ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ್ರು. ತಾನು ಎದುರಿಸಿದ 96 ಬಾಲ್​ನಲ್ಲಿ 84 ರನ್​ ಚಚ್ಚಿದ್ರು.

ಈ ಪೈಕಿ 5 ಬೌಂಡರಿಗಳು ಸೇರಿವೆ.ವಿರಾಟ್​ ಕೊಹ್ಲಿಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​​ 45, ಅಕ್ಷರ್​ ಪಟೇಲ್​​ 27 ರನ್​ ಚಚ್ಚಿದರು.

ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಕೆ.ಎಲ್​ ರಾಹುಲ್​ 2 ಭರ್ಜರಿ ಸಿಕ್ಸರ್​, 2 ಫೋರ್​ ಸಮೇತ 42 ರನ್​​ ಬಾರಿಸಿದರು.

ಹಾರ್ದಿಕ್​ ಪಾಂಡ್ಯ 28, ರವೀಂದ್ರ ಜಡೇಜಾ 2 ರನ್​ ಗಳಿಸಿದರು. ಭಾರತ 48.1 ಓವರ್​ನಲ್ಲೇ 267 ರನ್​ ಗಳಿಸಿ ಗೆದ್ದು ಬೀಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *