
ಸಕಲೇಶಪುರ : ತಾಲ್ಲೂಕಿನ ಆನೆಮಹಲ್ ಗ್ರಾಮ ಪಂಚಾಯತಿ ನಲ್ಲಿ ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿದ್ದೂ, ಪ್ರಸ್ತುತ ಕುಡಿಯುವ ನೀರು ಪ್ರಾಣಿಗಳು ಸ್ನಾನ ಮಾಡಿಸಲು ಕೂಡಾ ಅಸಾಧ್ಯ ವಾಗಿದೆ.
ಈ ನೀರಿಗೆ ನೀರಿನ ಕಂದಾಯ ವಸೂಲಿ ಮಾಡಿಕೊಂಡು,ಕೊಳಕು ನೀರನ್ನು ಕುಡಿಸುತಿದ್ದು, ಗ್ರಾಮಸ್ಥರು ಹಲವಾರು ಕಾಯಿಲೆ ಹಾಗೂ ಚರ್ಮ ರೋಗಕ್ಕೆ ತುತ್ತಾಗುತ್ತಿದ್ದು, ಗ್ರಾಮಪಂಚಾಯಿತಿ ಅಧಿಕಾರಿಗಳು ಕಣ್ಣ್ ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶುದ್ಧ ನೀರು ಒದಗಿಸದಿದ್ದರೆ ಗ್ರಾಮ ಪಂಚಾಯತಿ ಬಂದ್ ಮಾಡಿಸಲಾಗುತ್ತದೆಎಂದು ಆನೆಮಹಲ್ ಗ್ರಾಮ ಪಂಚಾಯತಿ ಬೆಳೆಗಾರ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.





