
ಸಕಲೇಶಪುರ : ತಾಲೂಕಿನ ಕಾಗಿನೆರೆಯ ಚಾಮುಂಡಿ ದೇವಿಯ ವಾರ್ಷಿಕ ಪೂಜಾ ಮಹೋತ್ಸವವು ಮೇ 11, 2025ರ ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾಗಿನೆರೆ ದೇವಸ್ಥಾನದಲ್ಲಿ ನಡೆಯಲಿದೆ.
ಕಾಗಿನೆರೆ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಪೂಜೆಯ ದಿನದಂದು ಯಾವುದೇ ರೀತಿಯ ಪ್ರಾಣಿ ಬಲಿ (ಕೋಳಿ, ಹಂದಿ, ಕುರಿ/ಮೇಕೆ) ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಶನಿವಾರ ಸಂಜೆ ಮತ್ತು ಭಾನುವಾರ ಮುಂಜಾನೆ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ. ಪೂಜಾ ಪ್ರಸಾದವಾಗಿ, ಪೂಜೆಯ ನಂತರ ಸಾಮೂಹಿಕ ಊಟವನ್ನು ದೇವಸ್ಥಾನದ ವತಿಯಿಂದಲೇ ಎಲ್ಲಾ ಭಕ್ತರಿಗೆ ನೀಡಲಾಗುವುದು.
ಎಲ್ಲಾ ಭಕ್ತರು ಈ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯಲು ಕೋರಲಾಗಿದೆ.
ವ್ಯವಸ್ಥಾಪಕ ಸಮಿತಿ,ಚಾಮುಂಡಿ ದೇವಿ ದೇವಸ್ಥಾನ,ಕಾಗಿನೆರೆ, ಸಕಲೇಶಪುರ ತಾಲೂಕು
