
ಹಾಸನ: ನಾವು ಯಾವ ಕೆಲಸವನ್ನು ಶ್ರದ್ಧೆ, ಭಕ್ತಿ, ಪ್ರೀತಿ ಹಾಗೂ ಸಾಮಾನ್ಯ ಕೆಲಸವಾಗಲಿ ಅದರ ಮೇಲೆ ಎಲ್ಲಾ ರೀತಿಯ ಶ್ರಮ ಹಾಕುತ್ತಾ ಹೋದರೇ ಒಂದು ಉತ್ತಮ ವೇದಿಕೆ ಒದಗಿಸುತ್ತದೆ ಎನ್ನುವುದಕ್ಕೆ ನಾನೆ ಸಾಕ್ಷಿ ಎಂದು ತೊಗಲು ಬೊಂಬೆ ಹಿರಿಯ ಕಲಾವಿದ ಗುಂಡುರಾಜು ತಿಳಿಸಿದರು.
ನಗರದ ಹುಡಾ ಕಛೇರಿ ಎದುರು, ಕುವೆಂಪು ರಸ್ತೆಯಲ್ಲಿರುವ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತೊಗಲು ಬೊಂಬೆಯ ಆಟವನ್ನು ನನ್ನ ಐದನೇ ವಯಸ್ಸಿನಿಂದ ತಂದೆಯ ಬಳುವಳಿಯಾಗಿ ಕಲಿತು ಈ ಕ್ಷೇತ್ರಕ್ಕೆ ಕಾಲಿಟ್ಟವನು ನಾನು. ಬೊಂಬೆ ಆಟವಲ್ಲದೇ ನಾಟಕವನ್ನು ಕೂಡ ಕಲಿತು ಮತ್ತೊಬ್ಬರಿಗೆ ಕಲಿಸಲಾಗುತ್ತಿದ್ದೇನೆ.
ಹರಿಕಥೆ ಸೇರಿದಂತೆ ಅನೇಕ ವಿಭಾಗದಲ್ಲಿ ಕಲಾವಿದನಾಗಿದ್ದೇನೆ. ನಾವು ಯಾವ ಕ್ರಿಯೆಯನ್ನು ಶ್ರದ್ಧೆ, ಭಕ್ತಿ, ಪ್ರೀತಿ ಹಾಗೂ ಸಾಮಾನ್ಯ ಕೆಲಸವಾಗಲಿ ಅದರ ಮೇಲೆ ಎಲ್ಲಾ ರೀತಿಯ ಶ್ರಮ ಹಾಕುತ್ತಾ ಹೋದರೇ ಒಂದು ಉತ್ತಮ ವೇದಿಕೆ ಒದಗಿಸುತ್ತದೆ ಎನ್ನುವುದಕ್ಕೆ ಉದಾಹರಣೆಗೆ ನಾನೆ ಸಾಕ್ಷಿಯಾಗಿದ್ದೇನೆ ಎಂದರು.
೨೦೦೯ ರಲ್ಲಿ ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ವರ್ಷವಾಗಿದ್ದು, ಈ ವೇಳೆ ಕೋರಿಯ ದೇಶದಲ್ಲಿ ಗೇಮ್ ನಡೆದಿದ್ದು, ವಿಶ್ವದ ೬೪ ದೇಶಗಳು ಭಾಗವಹಿಸಿದ್ದು, ಆ ಸಮಯದಲ್ಲಿ ಭಾರತ ನನಗೆ ಗೇಮ್ ಇಡಲಾಗಿದ್ದು, ನಾನು ಭಾಗವಹಿಸಿ ಗೆಲುವು ಪಡೆದೆನು. ನನ್ನ ಕುಟುಂಬ ಸಮೇತವಾಗಿ ಕೋರಿಯ ದೇಶಕ್ಕೆ ಕಳುಹಿಸಿಕೊಟ್ಟರು.
೬೪ ದೇಶದ ಸ್ಪರ್ದೆಯಲ್ಲಿ ಕೋರಿಯ ಚಿನ್ನ ಗೆದ್ದರೇ ನಾನು ಭಾರತದಿಂದ ಬೆಳ್ಳಿ ಪದಕ ಗೆದ್ದೇನು. ಅಲ್ಲಿಂದ ಜರ್ನಿ ಪ್ರಾರಂಭವಾಗಿ ಅಲ್ಲಿಂದ ಹಿಂದಿ, ಇಂಗ್ಲೀಷ್, ಸೌತಾಫ್ರಿಕ, ಜಿಬಾಂಬೆ ಸೇರಿದಂತೆ ಹಲವು ದೇಶಗಳಲ್ಲಿ ಈ ಬೊಂಬೆ ಪ್ರದರ್ಶನ ಮಾಡಲಾಗಿದೆ ಎಂದು ಹೇಳಿದರು. ಈ ಬಾರಿ ೧೨೦ ದೇಶಗಳು ಸೇರಿ ಒಂದು ಪ್ರಶಸ್ತಿಯನ್ನು ನನಗೆ ಕೊಟ್ಟಿದೆ. ಇವೆಲ್ಲಾ ಭಾಗ್ಯಗಳು ಸಿಕ್ಕಿರುವುದು ನನ್ನ ಕಲೆಯನ್ನು ಬೆಳೆಸಿದವರು ಹಳ್ಳಿಯ ಜನರು ಎಂದು ಇದೆವೇಳೆ ಗ್ರಾಮವನ್ನು ನೆನಪಿಸಿಕೊಂಡರು. ವಿವಿಧ ಸರಕಾರಿ ಕಾರ್ಯಕ್ರಮಗಳ ಜಾಗೃತಿ ಕೆಲಸಕ್ಕೆ ನಾನು ಪ್ರದರ್ಶಿಸಿದ್ದೇನೆ. ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದರೂ ಇನ್ನು ಕಲಿಯಬೇಕಾಗಿದೆ ಎಂದು ತಮ್ಮ ಜೀವನದ ನೆನಪನ್ನು ಇದೆ ವೇಳೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ಮಾತನಾಡಿ, ಅಂತರಾಷ್ಟ್ರೀಯ ತೊಗಲು ಬೊಂಬೆ ಕಲಾವಿದ ಕಲಾವಿದ ಗುಂಡುರಾಜು ಇಂದಿಗೂ ಕೂಡ ವಿದೇಶಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯ ಕಲೆಯಲ್ಲಿ ಒಂದಾದ ತೊಗಲುಲಬೊಂಬೆ ಬಗ್ಗೆ ತರಬೇತಿ ಕೊಡುತ್ತಿರುವುದು ಉತ್ತಮವಾಗಿದೆ ಎಂದರು.
ಇಲ್ಲಿ ಪ್ರದರ್ಶನ ಮಾಡಿ ತೊಗಲು ಬೊಂಬೆಯ ರಾಮಾಯಣದ ದೃಶ್ಯ ಕೆಲ ಸಮಯ ಪ್ರದರ್ಶನವಾದರೂ ಎಲ್ಲಾರನ್ನು ಮೈಮರೆಸಿದೆ. ಇಂತಹ ಕಲಾವಿದರನ್ನು ನಮ್ಮ ಲಯನ್ಸ್ ಸೇವಾ ಸಂಸ್ಥೆಗೆ ಬಂದಿರುವುದು ಸಂತೋಷವಾಗಿದೆ ಎಂದು ಹೇಳಿದರು.
ಇದೆ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಕಾರ್ಯದರ್ಶಿ ರವಿಕುಮಾರ್ ಬಲ್ಲೆನಹಳ್ಳಿ, ಖಜಾಂಚಿ ನಾಗರಾಜು ನಿಕಟಪೂರ್ವ ಅಧ್ಯಕ್ಷ ಹೆಚ್.ಕೆ. ನಾಗೇಶ್, ಮುಂದಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಲಿರುವ ಹೆಚ್.ರಮೇಶ್, ಖಜಾಂಚಿ ಹೆಚ್.ಆರ್. ಚನ್ನೇಗೌಡ, ಕಾರ್ಯದರ್ಶಿ ಶಿವಸ್ವಾಮಿ ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆ ಇತರರು ಉಪಸ್ಥಿತರಿದ್ದರು.
