
ಬೆಂಗಳೂರು : ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜು ವಿಧಾನಸೌಧದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರ ಕಚೇರಿಯಲ್ಲಿ ಕರ್ನಾಟಕ ಬೆಳಗಾರರ ಒಕ್ಕೂಟ ಹಾಗೂ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಜೊತೆ ಭೇಟಿ ಮಾಡಿ ಬೆಳಗಾರರು ಎದುರಿಸುತ್ತಿರುವ ಸಮಸ್ಯೆಗಳು ಬೆಳಗಾರರ ಜಮೀನು ಒತ್ತುವರಿ ಹಾಗೂ ಜಮೀನುಗಳನ್ನು ಲೀಜ್ ಗೆ ಕೊಡುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿ ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಬಿ ಎಲ್ ಶಂಕರ್ ಮತ್ತು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೊಟಮ್ಮ ಇನ್ನಿತರ ಮುಖಂಡರು ಭಾಗಿಯಾಗಿದ್ದರು


