ಸಕಲೇಶಪುರ : ನಗರದ ಕುಶಾಲ ನಗರ ಬಡಾವಣೆಯ ರಾಮು ಎಂಬುವರ ಮನೆಯಲ್ಲಿ ಬ್ರಹ್ಮ ಕಮಲ ಹೂವುಗಳು ಅರಳಿ ನೋಡುಗರ ಗಮನ ಸೆಳೆಯುತ್ತಿವೆ.

ಏಕಕಾಲದಲ್ಲಿ ಸುಮಾರು ಹನ್ನೆರಡಕ್ಕೂ ಹೆಚ್ಚು ಬ್ರಹ್ಮ ಕಮಲ ಹೂವುಗಳು ಅರಳಿರುವುದು ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಹೇಳುತ್ತಾರೆ

*ಬ್ರಹ್ಮ ಕಮಲ ಹೂವು ಬೆಳೆದ ರಾಮು ಅವರು, ಈ ಬ್ರಹ್ಮ ಕಮಲ ಹಿಮಾಲಯಕ್ಕೆ ಸೇರಿದ ಅಪರೂಪದ ಹೂವಾಗಿದ್ದು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಅರಳುತ್ತದೆ, ಈ ಬ್ರಹ್ಮ ಕಮಲವನ್ನು ರಾತ್ರಿ ರಾಣಿಯೆಂತಲೂ ಕರೆಯುತ್ತಾರೆ ಹಾಗೂ ದೈವಿಕ ಹೂವು ಎಂತಲೂ ಸಹ ಕರೆಯಲಾಗುತ್ತದೆ.

ಹಿಂದೂ ಧರ್ಮದಲ್ಲಿ ಬ್ರಹ್ಮ ಕಮಲ ಆಧ್ಯಾತ್ಮಿಕ ಮಹತ್ವ ಜೊತೆಗೆ ಬ್ರಹ್ಮ ಕಮಲ ಪರಮಾತ್ಮ ಮತ್ತು ದೇವರ ಆಧ್ಯಾತ್ಮಿಕ ಶಕ್ತಿಯನ್ನು ಸಂಕೇತಿಸುತ್ತದೆ ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಬ್ರಹ್ಮ ಕಮಲವನ್ನು ಧ್ಯಾನದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಇದು ಶಾಂತಿಯನ್ನು ಸಹ ಪಡೆಯಲು ಸಹಾಯಮಾಡುತ್ತದೆ ಎಂತಲೂ ಹೇಳುತ್ತಾರೆ.

ಈ ಬ್ರಹ್ಮ ಕಮಲವು ಔಷಧೀಯ ಗುಣಗಳನ್ನು ಸಹ ಹೊಂದಿದೆ ಎಂದು ನಂಬಲಾಗಿದೆ ಒಂದೇ ರಾತ್ರಿಯಲ್ಲಿ ಅರಳುವ ಈ ಹೂವನ್ನು ನೋಡಿದರೆ ಅತ್ಯಂತ ವಿಶೇಷವಾದ ಹೂವು ಎನಿಸುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *