
ಸಕಲೇಶಪುರ.ಪಟ್ಟಣದಲ್ಲಿ ಮಂಗಳವಾರ ಮತಾಂತರ ಕಾಯ್ದೆಯನ್ನು ಹಿಪಡಿಯಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವತಿಂದ ರಾಷ್ಟ್ರಪತಿಗಳಿಗೆ ಸಕಲೇಶಪುರ ಉಪ ವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಹಿಂದೆ ಇದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಸಾಮರಸ್ಯವನ್ನು ಕದಡಲು ಕಾಂಗ್ರೆಸ್. ಹೊರಟಿದ್ದು ಮತಾಂತರ ನಿಷೇಧ ಕಾನೂನನ್ನು ಪರಿಷ್ಕರಣೆ ಮಾಡಲು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಹಾಗೂ ರಾಜಕೀಯ ದ್ವೇಷಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನುಗಳನ್ನು ಹಿಂಪಡೆಯುತ್ತೇನೆ ಎಂದು ಇಂದಿನ ಕಾಂಗ್ರೆಸ್ ಸರ್ಕಾರ ಹೇಳುತ್ತಿರುವುದು ಖಂಡನೀಯ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಮತಾಂತರ – ರಾಷ್ಟ್ರಾಂತರ ಆಗುವ ರೀತಿಯಲ್ಲಿ ಲವ್ ಜಿಹಾದ್ ನಿಂದ ಹಿಂದೂ ಹೆಣ್ಣು ಮಕ್ಕಳನ್ನು ಸಿರಿಯಾ ಬಯೋತ್ಪಾದಕರಿಗೆ ತಳ್ಳುತ್ತಿರುವುದು ಕಂಡು ಬಂದಿದ್ದು ಮತಾಂತರ ಎಂದರೆ ಜಾತಿಯ ಮತದ ಬದಲಾವಣೆ ಆಗಿರುವುದಿಲ್ಲ ಮತಾಂತರ ಆದವವರು ರಾಷ್ಟ್ರ ವಿರೋಧಿಗಳಾಗಿ ತಯಾರು ಮಾಡುತ್ತಿರುವ ದೊಡ್ಡ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಇಂದಿನ ಕಾಂಗ್ರೆಸ್ ಸರ್ಕಾರ ದ್ವೇಷ ಭಾವನೆಯಿಂದ ಮತಾಂತರ ನಿಷೇಧ ಕಾನೂನನ್ನು ಪರಿಷ್ಕರಣೆ ಮಾಡುವುದನ್ನು ರಾಜ್ಯಪಾಲರು ತಿರಸ್ಕರಿಸಬೇಕು .ಬಲವಂತದ ಮತಾಂತರ ಕಾನೂನು ಪ್ರಕಾರ ತಪ್ಪು. ಈ ತಪ್ಪುಗಳು ಹೆಚ್ಚುತ್ತ ಹೋದಂತೆ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಮತಾಂತರ ನಿಷೇದ ಕಾನೂನನ್ನು ಜಾರಿಗೆ ತಂದಿತ್ತು.ಈ ಕಾನೂನನ್ನು ರಾಜಕೀಯ ದ್ವೇಷದಿಂದ ಕಾಂಗ್ರೆಸ್ ಸರಕಾರ ಹಿಂದಕ್ಕೆ ಪಡೆದಿದೆ.ಮತಾಂತರ, ಲವ್ ಜಿಹಾದ್ ಗಳು ಸಮಾಜದ ಉನ್ನತಿಗೆ ಹಾಗೂ ಹಿಂದೂ ಸಮಾಜಕ್ಕೆ ಮಾರಕ. ಈ ಕಾನೂನನ್ನು ಹಿಂದಕ್ಕೆ ಪಡೆದ ರಾಜ್ಯ ಸರಕಾರದ ಕ್ರಮವನ್ನು ಭಜರಂಗದಳ ಖಂಡಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರುಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ರಾಜ್ಯ ಮುಖಂಡರಾದ ರಘು ಸಕಲೇಶಪುರ ಮಾತನಾಡಿ ಹಿಂದೆ ಇದ್ದ ರಾಜ್ಯ ಸರ್ಕಾರ ಮಾಡಿದ ಮತಾಂತರ ಕಾಯ್ದೆ ನಂತರ ರಾಜ್ಯದ್ಯಂತ ಮತಾಂತರ ಆಗುವುದು ಸ್ವಲ್ಪ ಕಡಿಮೆ ಆಗಿತ್ತು ಆದರೆ ಕಾಂಗ್ರೆಸ್ ಸರ್ಕಾರ ಬಂದು ಮೇಲೆ ಮತಾಂತರ ಕಾಯ್ದೆ ವಾಪಾಸು ಪಡೆಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ರಾಜ್ಯ ಸರ್ಕಾರ ಮತಾಂತರ ಒಂದೇ ಅಲ್ಲದೆ ಪಠ್ಯಪುಸ್ತಕಗಳಲ್ಲಿದ್ದ ದೇಶಭಕ್ತರ ಅಧ್ಯಯನವನ್ನು ತೆಗೆದುಹಾಕುವುದು, ಗೋ ಹತ್ಯೆ ನಿಷೇದ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಹೇಳುವ ಮುಖಾಂತರ ದ್ವೇಷದ ರಾಜಕಾರಣ ಮಾಡುತ್ತಿದೆ ಹಾಗಾಗಿ ರಾಜ್ಯ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗಳ ಎಚ್ಚರಿಕೆ ಕೊಡುತ್ತಿದೆ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರವನ್ನು ಮುಂದುವರಿಸಬೇಕೆ ಹೊರತು ಈ ರೀತಿಯ ದ್ವೇಷ ರಾಜಕಾರಣ ಮಾಡಬಾರದು ಮತ್ತೆ ಯಾವುದೇ ಕಾರಣಕ್ಕೂ ಸಹ ಮತಾಂತರ ಕಾಯ್ದೆಯನ್ನು ವಾಪಸು ತೆಗೆದುಕೊಳ್ಳಬಾರದು ಇವತ್ತು ಇಡೀ ರಾಜ್ಯಾದ್ಯಂತ ರಾಜ್ಯಪಾಲರಿಗೆ ಮನವಿ ನೀಡುವ ಮೂಲಕ ಭಜರಂಗದಳವು ಒತ್ತಯಿಸುತ್ತಿದೆ ಎಂದ ಅವರುರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಜರಂಗದ ಹಾಸನ ಜಿಲ್ಲಾ ಸಹಸಂಯೋಜಕ ಕೌಶಿಕ್, ಸಕಲೇಶಪುರ ತಾಲ್ಲೂಕು ಪ್ರಮುಖ್ ಶಿವು ,ದುಷ್ಯಂತ್ ಗೌಡ, ಕಬ್ಬಿನಗದ್ದೆ ಮಂಜುನಾಥ್, ಧರ್ಮೇಶ್ ಗೌಡ, ಪ್ರತಾಪ್, ಸಂತೋಷ್,ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

