
ಅರಕಲಗೂಡು : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ರೋಟರಿ ಕ್ಲಬ್ ಆಫ್ ಅರಕಲಗೂಡು ಮಿಡ್ ಟೌನ್ ಇವರ ಸಹಯೋಗದಲ್ಲಿ “ದಿ. ದೇವರಾಜು ಹೆಚ್ ಡಿ,”ನಿವೃತ್ತ ಮುಖ್ಯೋಪಾಧ್ಯಾಯರು, ಹಿರೇಹಳ್ಳಿ ಗ್ರಾಮ ಇವರ ಸ್ಮರಣಾರ್ಥವಾಗಿ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ದೊಡ್ಡ ಮಗ್ಗೆ ಹೋಬಳಿ, ಹಿರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ “ಪ್ರಿಂಟರ್” ಅನ್ನು ಕೊಡುಗೆಯಾಗಿ ನೀಡಲಾಯಿತು.
ಶಾಲಾ ಮಕ್ಕಳಿಗೆ ಪೆನ್ನುಗಳನ್ನು ಮತ್ತು ಸಿಹಿಯನ್ನು ವಿತರಣೆ ಮಾಡಲಾಯಿತು. ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಮೊದಲು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಲನೆಯನ್ನು ಕೊಡಲಾಯಿತು.
ಸುಮಾರು 20 ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ರಕ್ತದಾನವನ್ನು ಮಾಡಿದರು
. ಸುಮಾರು ಇನ್ನೂರಕ್ಕು ಹೆಚ್ಚು ಜನ ಗ್ರಾಮಸ್ಥರು ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ವಲಯ 9 ರ ವಲಯ ಸೇನಾನಿಯಾದ “ರೋ!! ಶಶಿಧರ್ ಬಿ ಸಿ” ರವರು, ರೋಟರಿ ಕ್ಲಬ್ ಆಫ್ ಅರಕಲಗೂಡು ಮಿಡ್ ಟೌನ್ ನ ಅಧ್ಯಕ್ಷರಾದ “ರೋ!!ಪ್ರವೀಣ್” ರವರು ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷರಾದ “ಹೆಚ್.ಡಿ ವಜ್ರ ಕುಮಾರ್” ರವರು ಕಾರ್ಯದರ್ಶಿ “ಕೆ.ಎಸ್.ಯೋಗೇಶ್” ರವರು ಹಾಜರಿದ್ದರು.
ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು.ಇಂತಿ : ಅಧ್ಯಕ್ಷರು/ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನ.







