ಸಕಲೇಶಪುರ : ಜಾಗದ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದರೂ ತಡೆಯಾಜ್ಞೆಯಲ್ಲಿದ್ದ ಸ್ಥಳದಲ್ಲಿ ಕಾಮಗಾರಿ ನಡೆಸಲು ಮುಂದಾದದನ್ನು ಪ್ರಶ್ನೆಸಿದ ನಿರ್ದೇಶಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮುಂದಾಗಿರುವ ಘಟನೆ ನಡೆದಿದೆ.

ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆಯಲ್ಲಿರುವ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ಶಂಕರ್ ಮೇಲೆ ಸುನಿಲ್ ಕುಮಾರ್ ಎಂಬಾತನೇ ಹಲ್ಲೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದಾನೆ.

ಸಂಘದ ನಿರ್ದೇಶಕ ಮೆಣಸಮಕ್ಕಿ ಉದಯ ಶಂಕರ್ ಮಾತನಾಡಿ,ಮುನೀರ್ ಜಾನ್, ಹಾಗೂ ಸುನೀಲ್ ಕುಮಾರ್ ರವರ ಮನೆ ನಮ್ಮ ಸಂಘದ ಬದಿಯಲ್ಲಿ ಇದ್ದು ಸರ್ವೆ ನಂ12/2ಎ 0.8ಗುಂಟೆ ಜಾಗದಲ್ಲಿ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಹಳೆ ಕಟ್ಟಡ ಇದ್ದು ಇವರುಗಳು ತಿರುಗಾಡಲು ಹಿಂದಿನ ಅಧ್ಯಕ್ಷರಿಂದ ತಾತ್ಕಾಲಿಕವಾಗಿ ಅನುಮತಿ ಪಡೆದಿದ್ದರು.

ನಂತರದಲ್ಲಿ ಇವರು ಈ ಜಾಗದಲ್ಲಿ ರಸ್ತೆ ಬೇಕೆಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ 3 ತಿಂಗಳ ಅನುಮತಿ ಪಡೆದು ನಂತರದ ದಿನಗಳಲ್ಲಿ ಕೋರ್ಟ್ ಮೊರೆ ಹೋಗಿ O.S No272/2024 ಕೇಸು ದಾಖಲಿಸಿದ್ದು ಘನ ನ್ಯಾಯಾಲಯವು ಯಥಾ ಸ್ಥಿತಿ ಕಾಪಾಡುವಂತೆ ತಿಳಿಸಿದ್ದರು ಕೂಡ ಮೇ ತಿಂಗಳಲ್ಲಿ ನಮ್ಮ ಕಛೇರಿ ಹಳೇ ಗೇಟನ್ನು ನಮ್ಮ ಗಮನಕ್ಕೆ ಬಾರದೆ ತೆರವುಗೊಳಿಸಿದ್ದು ಬೇರೆ ಗೇಟ್ ಅಳವಡಿಸಲು ಹೋದಾಗ ಎರಡು ಮನೆಯ ಜನರು ಹೊಸ ಗೇಟನ್ನು ಕಿತ್ತು ಹಾಕಿದ್ದು ನಂತರ ಸಂಘದಿಂದ ಠಾಣೆಗೆ ದೂರು ನೀಡಿದ್ದೆವು.

ಸ್ಥಳಕ್ಕೆ PSI ಭೇಟಿ ನೀಡಿ ಸ್ಥಳ ಪರಿಶೀಲಿಸಿ ಯಥಾ ಸ್ಥತಿ ಕಾಪಾಡುವಂತೆ ತಿಳಿಸಿದ್ದರು ಆದರೆ ದಿನಾಂಕ ಜುಲೈ 18 ರಂದು ಮತ್ತೆ ಮುನೀರ್ ಜಾನ್ ಹಾಗೂ ಸುನೀಲ್ ಕುಮಾರ್ ರವರು ಗೇಟಿನ ಕಂಬವನ್ನು 1/2 ಅಡಿ ಅಗಲ ಮಾಡಿ ದಾರಿ ಮಾಡಿಕೊಂಡಿರುತ್ತಾರೆ. ಇನ್ನು ಮುಂದೆ ಯಾವುದೇ ತಕರಾರು ಮಾಡದಂತೆ ತಿಳಿಸಿದ್ದರೂ ಸಹ ದಿನಾಂಕ ಸೋಮವಾರ ದಂದು ನಲ್ಲಿ ಪೈಪ್ ಲೈನ್ ಕೆಲಸ ಮಾಡಿಸಲು ಸುನೀಲ್ ಕುಮಾರ್ ಮತ್ತು ಮುನೀರ್ ಜಾನ್ ರವರ ಮಗ ಮುಂದಾಗಿರುತ್ತಾರೆ ಆಗ ನಮ್ಮ ಸಂಘದ ನಿರ್ದೇಶಕರು ಮತ್ತು ಅಧ್ಯಕ್ಷರು ಪ್ರಶ್ನೆ ಮಾಡಿದ ವೇಳೆ ಸುನೀಲ್ ಕುಮಾರ್ ರವರು ನಿರ್ದೇಶಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ಮಾಡಲು ಮುಂದಾಗಿರುತ್ತಾರೆ.ಆದ್ದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕಾಗಿ ಕೇಳಿಕೊಳ್ಳುತ್ತೇನೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *