
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳು ಯೋಗ ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.ಈ ವೇಳೆ ಪ್ರಾಂಶುಪಾಲರಾದ ಶಾಂತಿ ಅವರು ಮಾತನಾಡಿ ಪ್ರತಿ ದಿನ ಯೋಗ ಮಾಡುವುದರಿಂದ ಪ್ರತಿಯೊಬ್ಬರೂ ಆರೋಗ್ಯದಿಂದ ಇರಬಹುದು.ಯೋಗ ನಮ್ಮ ದೇಹಕ್ಕೆ ಮಾತ್ರವಲ್ಲ ನಮ್ಮ ಮನಸ್ಸನ್ನು ಪ್ರಶಾಂತವಾಗಿ ಇಡಬಹುದು ಯೋಗದಿಂದ ಯಾವುದೇ ರೋಗ ಲಕ್ಷಣಗಳು ಬರುವುದಿಲ್ಲ ಮನುಷ್ಯನು ಆರೋಗ್ಯವಂತಾಗಿಯೂ ಮತ್ತು ಹೆಚ್ಚು ದೀರ್ಘಾಯಸ್ ಆಗಿಯೂ ಇರಬಹುದು.ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯೋಗವನ್ನು ದಿನಚರಿಯಾಗಿ ಮಾಡಿ ಯೋಗಾಸನವನ್ನು ಮಾಡಿದರೆ ಆರೋಗ್ಯಕರವಾಗಿ ಇರಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


