
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಇಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಾಲೇಜ್ ವಿಭಾಗದವತಿಯಿಂದ ಶಾಲಾ ಆವರಣದಲ್ಲಿ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಹಾಗೂ ಯೋಗಾಸನವನ್ನು ಶಾಲಾ ಅಭಿವೃದ್ಧಿ ಸದಸ್ಯ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಕರಡಿಗಾಲ ಹರೀಶ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಕಾಲೇಜ್ ನ ಎಲ್ಲ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಅರ್ಥಪೂರ್ಣ ವಿಶ್ವ ಯೋಗ ದಿನಾಚರಣೆ ಆಚರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ವನ್ನು ಅರ್ಥಪೂರ್ಣವಾಗಿ ಕರಡಿಗಾಲ ಹರೀಶ್ ವಿವರಿಸಿದರು.ಕಾರ್ಯಕ್ರಮದಲ್ಲಿ ಕಾಲೇಜ್ ಪ್ರಿನ್ಸಿಪಾಲ್ ಬೆಟ್ಟದಹಳ್ಳಿ ಮಂಜುನಾಥ್, ಕರಡಿಗಾಲ ಹರೀಶ್,ಉಪ ಪ್ರಾಂಶುಪಾಲರಾದ ಲತ, ಮುಖ್ಯ ಶಿಕ್ಷಕಿಯಾದ ಶಾರದಾ, ಶಿಕ್ಷಕಿ ಶೋಭಾ ಹಾಗೂ ಶಾಲಾ ಹಾಗೂ ಕಾಲೇಜ್ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.


