ಕೀನ್ಯಾದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಪ್ರದೇಶವಾದ ಕ್ವಾಲೆ ಕೌಂಟಿಯ (Kenya’s Kwale County) ಸಿಂಬಾ ಗೋಲಿನಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ವಿಮಾನ ಪತನಗೊಂಡಿದೆ.

ಕೀನ್ಯಾದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಪ್ರದೇಶವಾದ ಕ್ವಾಲೆ ಕೌಂಟಿಯ (Kenya’s Kwale County) ಸಿಂಬಾ ಗೋಲಿನಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ವಿಮಾನ ಪತನಗೊಂಡಿದೆ.

ವಿಮಾನವು 0530Z ನಲ್ಲಿ ಡಯಾನಿಯಿಂದ ಹೊರಟು ಕಿಚ್ವಾ ಟೆಂಬೊಗೆ (Diani to Kichwa Tembo) ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ 8:30 ರ ಸುಮಾರಿಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಲ್ಲಿ ಅಪಘಾತವಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಮಸುಕಾದ ಗೋಚರತೆ ಮತ್ತು ಅಹಿತಕರ ಹವಾಮಾನ ಪರಿಸ್ಥಿಗಳು ಅಪಘಾತಕ್ಕೆ ಕಾರಣವಾಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಮಾನಯಾನ ಸಂಸ್ಥೆಯು , ಮೊಂಬಾಸವನ್ನು ಸಂಪರ್ಕಿಸುವ ಮಾಸಾಯಿ ಮಾರಾ ಮತ್ತು ನೈರೋಬಿ ಸೇರಿದಂತೆ ಕೀನ್ಯಾದಾದ್ಯಂತ ಪ್ರಮುಖ ಪ್ರವಾಸಿ ತಾಣಗಳೊಂದಿಗೆ ವಿಮಾನಗಳನ್ನು ನಿರ್ವಹಿಸುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *