ಹಾಸನ : 12 ಶತಮಾನದ ಶಿವಶರಣರ ವಚನ ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸುವ ಮೂಲಕ ಶರಣ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಕನ್ನಡ ನಾಡನ್ನು ಕೈಲಾಸ ಮಾಡಿದ ಕೀರ್ತಿ ಹಿರಿಯ ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಲ್ಲುತ್ತದೆ ಎಂದು ಕರಡಿಗವಿ ಮಠ ಶ್ರೀ ಶಿವಶಂಕರ ಶಿವಯೋಗಿಸ್ವಾಮಿಗಳು ಹೇಳಿದರು.

ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆಯಿಂದ ಶಿವರುದ್ರಪ್ಪ ಅವರ 100 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು ಈ ನಾಡಿನ ಯುವ ಜನಾಂಗ ಹಾಗೂ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು.ಅಂತಹ ವಚನ ಸಾಹಿತ್ಯವನ್ನುಶಾಲೆಗಳು ಹಾಗೂ ಅಪಾರ ಮಂದಿ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ ಇಂತಹ ಆದರ್ಶ ವ್ಯಕ್ತಿಗಳ ಜೀವನ ದರ್ಶನ ಇಂದಿನ ಯುವಕರಿಗೆ ಮಾದರಿಯಾಗಬೇಕು ಎಂದರು.

ಸಂಕಾಲಪುರ ಮಠದ ಶ್ರೀ ಶಾಂತವೀರಮಲ್ಲಿಕಾರ್ಜುನಸ್ವಾಮೀಜಿ ಮಾತನಾಡಿ ಹನ್ನೆರಡನೇ ಶತಮಾನದ ಶರಣರ ವಚನಗಳು ಜನಮಾನಸಕ್ಕೆ ತಲುಪಿಸಲು ಶಿವರುದ್ರಪ್ಪ ಅವರು ಈ ಶತಮಾನ ಕಂಡ ಶ್ರೇಷ್ಟ ದಾರ್ಶನಿಕ ಸಂತ. ಕನ್ನಡ ನಾಡಿನ ಶ್ರೇಷ್ಠ ಕವಿ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ ಕೇವಲ ವಚನ ಸಾಹಿತ್ಯವಷ್ಟೇ ಅಲ್ಲದೆ ಕನ್ನಡ ನಾಡು, ನುಡಿ, ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡ ಶಿವರುದ್ರಪ್ಪ ಅವರ ಒಡನಾಡಿಯಾಗಿ ನಾಡು ನುಡಿಗೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ಶ್ರೇಷ್ಠ ಚೇತನ ಎಂದು ಬಣ್ಣಿಸಿದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಮಾತನಾಡಿ ಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಅತೀತವಾದುದು. ಅಳಿಯುತ್ತಿದ್ದ ವಚನ ಈ ಸಾಹಿತ್ಯವನ್ನು ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಸುತ್ತೂರು ಜಗದ್ಗುರು ಡಾ.ಶ್ರೀ ರಾಜೇಂದ್ರಸ್ವಾಮೀಜಿಯವರು ಶರಣ ಸಾಹಿತ್ಯ ಪರಿಷತ್ತು ರಚಿಸಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹಾಗಾಗಿ ಎಲ್ಲರೂ ಬಸವಾದಿ ಶರಣರು ಸಾರಿದ ” ಇವನಾರವ ಎನ್ನದೇ ಇವ ನಮ್ಮವ ” ಎಂದು ಎಲ್ಲರನ್ನೂ ಅಪ್ಪಿದ ಆಧ್ಯಾತ್ಮಿಕ ಚಿಂತನೆಯ ಸಾಹಿತ್ಯವೇ ವಚನ ಸಾಹಿತ್ಯ ಎಂದು ವಿಶ್ಲೇಷಿಸಿದರು.

ಹಾಸನ ಜಿಲ್ಲಾ ಉಪಾಧ್ಯಕ್ಷರು ನಂಜುಂಡಸ್ವಾಮಿ, ತಾಲ್ಲೂಕು ಅಧ್ಯಕ್ಷರು ಲೋಹಿತ್ ಕೌಡಹಳ್ಳಿ, ರಾಜಕುಮಾರ್, ಧನಂಜಯ್, ಗಣೇಶ್ ಎಂ.ಸಿ. ರಾಧಿಕಾ, ಶಾರದಗುರುಮೂರ್ತಿ, ಶಷಿರೇಖ, ಮೀನಾಕ್ಷಿ, ಗಿರೀಜನಿರ್ವಾಣಿ, ಮಣಿದೇವರಾಜ್, ನಾಗರತ್ನ, ಗಾಯಂತ್ರಿ, ಅನುಸೂಯ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಮುಂತಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *