
ಸಕಲೇಶಪುರ : ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಬಹಳ ಹಿಂದೆಯೇ ಹುಲ್ಲಹಳ್ಳಿ ಗ್ರಾಮದ ಸ.ನಂ 76 ರ ಪಹಣಿಯಲ್ಲಿ ಅಡಿಕೆ ಬೆಳೆ ಎಂದು ನಮೂದಾದ ಹಿರಿಮೆ ಇವರದು.ಆದರೆ ಎರಡು ವರ್ಷದಿಂದ ಈಚೆಗೆ ಬೆಳೆ ಸಮೀಕ್ಷೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೈಬ್ರೀಡ್ ಭತ್ತ ಎಂಬುದಾಗಿ ನಮೂದಾಗಿ ಸರ್ಕಾರದ ಅನುದಾನ ಹಾಗೂ ಬೆಳೆ ವಿಮೆಯಿಂದ ವಂಚಿತರಾಗಿದ್ದರು.
ಈ ವಿಚಾರವನ್ನು ಕಂದಾಯ ಸಚಿವರವರೆಗೂ ತಲುಪಿಸಿ ಸಚಿವರು ಅಧಿಕಾರಿಗಳಿಗೆ ಮತ್ತೊಮ್ಮೆ ಹೀಗಾಗದಂತೆ ಎಚ್ಚರವಹಿಸಲು ತಿಳಿಸಿದ್ದರು.
ಆದರೆ ಕಳೆದ ಬಾರಿ ಭತ್ತ ಎಂದು ನಮೂದಾಗಿದ್ದ ಪಹಣಿಯಲ್ಲಿ ಈ ಬಾರಿ ಪಾಳು ಎಂಬುದಾಗಿ ನಮೂದಿಸಿ ಮತ್ತೊಮ್ಮೆ ಕೃಷಿ ಅಧಿಕಾರಿಗಳು ಬೇಜವಾಬ್ದಾರಿ ಮೆರೆದು ಸರಿಪಡಿಸುವಂತೆ ತಿಳಿಸಿ ಮನವಿ ಪತ್ರ ನೀಡಿದರೆ ಅದಕ್ಕೂ ಸ್ಪಂದಿಸದೆ ಮನಸ್ಸೋ ಇಚ್ಛೆ ಕೆಲಸ ನಿರ್ವಹಿಸಿದ್ದಾರೆ…
ಹಾಗಾಗಿ ಈ ಬಾರಿಯೂ ಕೂಡ ಸರ್ಕಾರದ ಬೆಳೆ ವಿಮೆ ಹಾಗೂ ಅನುದಾನದಿಂದ ವಂಚಿತರಾಗುವ ಕಳವಳ ವ್ಯಕ್ತಪಡಿಸಿ ಈರೀತಿ ಸಮಸ್ಯೆಯನ್ನು ಅನುಭವಿಸುತ್ತಿರುವ ಸಕಲೇಶಪುರ ತಾಲ್ಲೂಕಿನ ರೈತರ ಬೆನ್ನೆಲುಬಾಗಿ ನಿಂತು ಈಗ ಆಗಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಕಾನೂನು ಹೋರಾಟ ಮಾಡಲು ಸಿದ್ದವಾಗಿರುವುದಾಗಿ ತಿಳಿಸಿ…ತಮಗೆ ಹಾಗೂ ಇದೇರೀತಿ ಸಮಸ್ಯೆ ಆಗಿರುವ ರೈತರ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಯಾವುದೇ ರೈತರಿಗೆ ಈ ರೀತಿ ಸಮಸ್ಯೆಯಾದರೆ ಸಮಸ್ಯೆ ಅನುಭವಿಸುತ್ತಿರುವ ರೈತರನ್ನು ಭೇಟಿಮಾಡಿ ಅವರ ಪರವಾಗಿ ಕೃಷಿ ಅಧಿಕಾರಿಗಳ ವಿರುದ್ದ ಮಲೆನಾಡು ರಕ್ಷಣಾ ಸೇನೆಯು ಬೃಹತ್ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.



