ಸಕಲೇಶಪುರ : ರಾಜ್ಯದಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿರಬೇಕಾದ ಪರಿಸ್ಥಿತಿ ಇದ್ದು ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ನಾನು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದೇನೆ ಎಂದು ಇಲ್ಲಿನ ಪೋಲಿಸರು ಸ್ವಯಂ ಪ್ರೇರಿತರಾಗಿ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಯಾವುದೆ ಗಲಭೆಯಾಗದಿದ್ದರು , ಯಾವುದೆ ಅಹಿತಕರ ಘಟನೆ ಸಂಭವಿಸದಿದ್ದರು ಸಹ ಪೋಲಿಸರು ಮೂರ್ಖತನದಿಂದ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕಾರಣವಾಗಿದೆ.ಯಾವುದೇ ರೀತಿಯಲ್ಲಿ ನಾನು ಪ್ರಚೋದನಕಾರಿಯಾಗಿ ಮಾತನಾಡಿಲ್ಲ, ಹಿಂದೂ ಹುಡುಗಿಯರ ರಕ್ಷಣೆ ಕುರಿತು ಮಾತನಾಡಿದರೆ ಅದು ಪ್ರಚೋದನೆಯ? ಗೋ ಹತ್ಯಾ ಮಾಡುವುದನ್ನು ತಡಿಬೇಕು ಎಂದರೆ ಅದು ಪ್ರಚೋದನೆಯ?ಮತಾಂತರ ತಡೆದು ಹಿಂದೂಗಳನ್ನು ಉಳಿಸಬೇಕು ಎಂದರೆ ಪ್ರಚೋದನಕಾರಿಯಾಗುತ್ತದಾ?

ಅಕ್ರಮ ಬಾಂಗ್ಲಾದೇಶಿಯರನ್ನು ಓಡಿಸಿ ಎಂದರೆ ಪ್ರಚೋದನಕಾರಿಯಾಗುತ್ತದಾ?ಪೋಲಿಸರು ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪೋಲಿಸರು ಸಹ ಇದೇ ದೇಶದಲ್ಲಿ ಬದುಕಬೇಕಾಗಿದೆ. ನಾವು ಯಾರೋ ಯಡಿಯೂರಪ್ಪನೊ, ಸಿದ್ದರಾಮಯ್ಯನೊ ಮಾತು ಕೇಳಿಕೊಂಡು ಬದುಕೋ ಹಾಗಿಲ್ಲ, ಕಾನೂನು ಏನು ಹೇಳೋತ್ತೋ ಅದರ ಪ್ರಕಾರ ಕೆಲಸ ಮಾಡಲಿ, ಕಾಂಗ್ರೆಸ್ಗೆ ಏನು ದೇಶ ಧರ್ಮ ಬೇಕಿಲ್ಲ ಪೋಲಿಸರು ನ್ಯಾಯಯುತವಾಗಿ ಕೆಲಸ ಮಾಡಲಿ ಎಂದರು.

ಈ ಸಂಧರ್ಭದಲ್ಲಿ ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ತಾಲೂಕು ಅಧ್ಯಕ್ಷ ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed