
ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಟೆಕ್ನಿಕಲ್ ಫೇಸ್ಟ್ ನಲ್ಲಿ ಹಾಸನ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.
ಟೆಕ್ನಿಕಲ್ ಪೇಪರ್ ಪ್ರೆಸೆಂಟೇಷನ್ ಪ್ರಥಮ ಸ್ಥಾನವನ್ನು ಮುಕ್ತದಾಮಿನಿ ಪಡೆದಿದ್ದಾರೆ. ಕ್ರಾಪ್ಟಿಂಗ್ ಡರ್ಬಿಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಎಸ್ ಆರ್ ಪುನೀತ್ ಪಡೆದಿದ್ದಾರೆ
ಸರ್ವೆ ಸಾಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಿಂಚನ. ಬಿ., ಅವರ ತಂಡವು ಪಡೆದುಕೊಂಡಿದೆ. ಮಲೇನಾಡು ಇಂಜಿನಿಯರಿಂಗ್ ಸಿವಿಲ್ ವಿಭಾಗದ ಪ್ರೊಫೆಸರ್ ಗಳಾದ ಡಾ. ಮುರಳಿಧರ್ ಮತ್ತು ಡಾ. ಸುಪ್ರೀಮ ಎಂ.ಜೆ ಮಾರ್ಗದರ್ಶನ ನೀಡಿದ್ದರು
ವಿದ್ಯಾರ್ಥಿಗಳ ಪರಿಶ್ರಮ ಪ್ರತಿಭೆ ಮತ್ತು ಸಮರ್ಪಣೆಯಿಂದ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಮತ್ತು ಮಲನಾಡು ಇಂಜಿನಿಯರಿಂಗ್ ಇಂಜಿನಿಯರಿಂಗ್ ಕಾಲೇಜಿಗೆಗೌರವ ತರುವ ಇವರ ಸಾಧನೆ ಸಂತೋಷ ತಂದಿದೆ ಎಂದು ಸಿವಿಲ್ ವಿಭಾಗದ ಮುಖ್ಯಸ್ಥರು ಆದ ಡಾ.ಸುಮನ ಜಯ ಪ್ರಕಾಶ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್ ಜೆ.ಅಮರೇಂದ್ರ್ ಅವರು ಹಾಗೂ ಸಿವಿಲ್ ವಿಭಾಗದ ಪ್ರಾಧ್ಯಾಪಕರಾದ ಹಾಗೂ ಮಾಜಿ ಪ್ರಿನ್ಸಿಪಾಲರಾದ ಡಾ ಎ. ಜೆ.ಕೃಷ್ಣಯ್ಯನವರು ಅಭಿನಂದಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ಸಹ ಅಭಿನಂದಿಸಿದೆ
