
ಸಕಲೇಶಫುರ : ತಾಲ್ಲೂಕಿನ ಶುಕ್ರವಾರಸಂತೆ ಸಮೀಪದ ಈಚಲಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕಾಳಿಕಾ ದುರ್ಗಾಪರಮೇಶ್ವರಿ ವಿಶ್ವಕರ್ಮ, ಮಹಾಗಣಪತಿ, ನವಗ್ರಹ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ಏ.21ರಿಂದ ಏ.24ರ ವರೆಗೆ ನಡೆಯಲಿದೆ.
ಏ.22 ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಿಶ್ವಕರ್ಮ ಹೋಮ, ದುರ್ಗಾಹೋಮ, ಮಹಾಗಣಪತಿ ಹೋಮ, ವಸ್ತ್ರಾಧಿವಾಸ, ಪುಷ್ಪಾಧಿಮಾಸ ನಡೆಯಲಿದೆ.ಸಂಜೆ 5 ರಿಂದ 9ರ ವರೆಗೆ ಬ್ರಹ್ಮ ಕಲಸ ಸ್ಥಾಪನೆ, ಅಧಿವಾಸ ಹೋಮಗಳು, ವಿಗ್ರಹಗಳಿಗೆ ಅಷ್ಟಬಂಧನ.
ಏ..23ರಂದು ಬೆಳಿಗ್ಗೆ 4 ರಿಂದ ಬೆ.11ರ ವರೆಗೆ ನೇತ್ರೋನಿಲನ, ಪ್ರಾಣಪ್ರತಿಷ್ಠೆ, ಗೋ ಪೂಜೆ, ನಿರೀಕ್ಷಣೆ, ಮಹಾಗಣಪತಿ ಪ್ರಾರ್ಥನೆ, ಕರ್ಮಣ ಪುಣ್ಯಾಹ ವಾಚನ, ದೇವರ ಮೂಲಮಂತ್ರ ಹೋಮ, ಕಲಾ ಹೋಮ, ತತ್ವ ಹೋಮ, ಮಹಾಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಪೂರ್ವಕ ಮಹಾಕುಂಭಾಭಿಷೇಕ, ಮಹಾಲಂಕಾರ, ಮಹಾ ಮಂಗಳಾರತಿ ನಡೆಯಲಿದೆ..
ಬೆ. 11.30 ರಿಂದ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.ಶಾಸಕ ಸಿಮೆಂಟ್ ಮಂಜು ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಭೋಗರಾಜಾಚಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಸ್ಥಾಪಕರಾದ ಪುಷ್ಪಾವತಿ ಮಂಜುನಾಥ್ ಆಚಾರ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಭೋಗರಾಜಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.24ರಂದು ಬೆಳಿಗ್ಗೆ 9ರಿಂದ 11ರ ವರೆಗೆ ಚಂಡಿಕಾ ಹೋಮ ನಡೆಯಲಿದೆ.
