ಸಕಲೇಶಪುರ: ಸಮಾಜ ಕಲ್ಯಾಣ ಇಲಾಖೆಯಿಂದ 2026–27ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಹೆತ್ತೂರು ಗ್ರಾಮದ ಹಿರಿಯ ಜನಪರ ಹೋರಾಟಗಾರ ಹೆಚ್.ಎನ್. ಅಣ್ಣಯ್ಯ ಹಾಗೂ ನಿವೃತ್ತ ಪಿ.ಡಿ.ಒ. ಕೋಮರಯ್ಯ ಅವರನ್ನು ಮಲೆನಾಡು ಭೀಮ ಧ್ವನಿ ಸಂಘ (ರಿ) ವತಿಯಿಂದ ಸನ್ಮಾನಿಸಲಾಯಿತು.

ನಗರದಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರು ಗಣ್ಯರನ್ನು ಗೌರವಪೂರ್ವಕವಾಗಿ ಅಭಿನಂದಿಸಿ, ಅವರ ಸಮಾಜಮುಖಿ ಸೇವೆಯನ್ನು ಸಂಘದ ಪದಾಧಿಕಾರಿಗಳು ಕೊಂಡಾಡಿದರು.

ದಿನಾಂಕ 14.04.2026ರಂದು ವಿಧಾನಸೌಧದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸರ್ಕಾರದ ವತಿಯಿಂದ “ಮಲೆನಾಡ ಸಿರಿ” ಹಾಗೂ “ದಲಿತ ಕಣ್ಮಣಿ” ಬಿರುದಿನೊಂದಿಗೆ 2026ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಪ್ರಶಸ್ತಿಯನ್ನು ಹೆಚ್.ಎನ್. ಅಣ್ಣಯ್ಯ ಅವರಿಗೆ ಪ್ರದಾನ ಮಾಡಲಾಗಿತ್ತು.ಇದಲ್ಲದೆ, 2025ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ಪಡೆದ ನಿವೃತ್ತ ಪಿ.ಡಿ.ಒ. ಹಾಗೂ ದಲಿತ ಮುಖಂಡರಾದ ಕೋಮರಯ್ಯ ಅವರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ವತಿಯಿಂದ ಇಬ್ಬರು ಸಾಧಕರಿಗೂ ಅಭಿನಂದನೆ ಸಲ್ಲಿಸಿ, ಅವರ ಸೇವೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಮಲೆನಾಡು ಭೀಮ ಧ್ವನಿ ಸಂಘದ ಅಧ್ಯಕ್ಷರಾದ ನಾಗೇಶ್ ಎಂ.ಎಚ್. ಮಾಗೇರಿ, ಕಾರ್ಯದರ್ಶಿ ಸುರೇಶ್ ಬಿ.ಡಿ., ವಸಂತಕುಮಾರ್ ವಿ.ಎಂ., ವನಗೂರು ಯೋಗೇಶ್ ಡಿ.ಆರ್. (ದೊಡ್ಡಕಲ್ಲೂರು), ರಾಮಚಂದ್ರ ರಾವ್ (ಬ್ಯಾಗಡಹಳ್ಳಿ), ನಾಗೇಶ್ ವಿ.ಕೆ. (ವನಗೂರು) ಸೇರಿದಂತೆ ಹಲವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *