ಸಕಲೇಶಪುರ : ತಾಲ್ಲೂಕಿನ ನಾರ್ವೆ ಗೆ ಪ್ರತಿ ಶನಿವಾರ ಬರುತ್ತಿದ್ದ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿಯವರ ಗ್ಯಾಸ್ ವಾಹನ, ಇತ್ತೀಚಿನ ದಿನಗಳಲ್ಲಿ 23 ದಿನ ಕಳೆದರೂ ನಾರ್ವೆ ಗೆ ಬಂದಿಲ್ಲ. ವಾಹನ ಚಾಲಕರನ್ನು ಫೋನ್ ಮಾಡಿ ಕೇಳಿದರೆ, ನಾವು ಆ ರೂಟ್ ಗೆ ಬಂದಿಲ್ಲ ಬೇರೆಯವರನ್ನು ವಿಚಾರಿಸಿ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ.

ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಕರೆ ಮಾಡಿದರೆ ಫೋನ್ ತೆಗೆಯುವುದೇ ಇಲ್ಲ. ಗ್ಯಾಸ್ ಆಫೀಸ್ ಹತ್ತಿರ ಬಂದು ಗ್ಯಾಸ್ ಸಿಲಿಂಡರ್ ಕೇಳಿದರೆ ನಿಮ್ಮ ಊರಿಗೆ ಬಂದಾಗ ತೆಗೆದುಕೊಳ್ಳಿ ಇಲ್ಲಿ ಯಾರಿಗೂ ಸಿಲೆಂಡರ್ ಕೊಡುತ್ತಿಲ್ಲ ಎನ್ನುತ್ತಿದ್ದಾರೆ.

ನಾರ್ವೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಲ್ಪ ಸ್ವಲ್ಪ ಸೌದೆ ಲಭ್ಯವಿರುವುದರಿಂದ ಗ್ರಾಮಸ್ಥರು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಆದರೆ ಇದೇ ರೀತಿ ಮುಂದುವರೆದರೆ ಗ್ರಾಮಸ್ಥರು ಮುಂದೊಂದು ದಿನ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕುವುದಂತು ಖಂಡಿತ.

23 ದಿನದ ಹಿಂದೆ ನಾರ್ವೆಗೆ ಎಂದು ಕಳುಹಿಸಿದ ಗ್ಯಾಸ್ ವಾಹನ ಸುಂಡೆಕೆರೆ ತಲುಪುವುದರೊಳಗೆ ಗ್ಯಾಸ್ ಖಾಲಿ ಆಗಿ ವಾಪಸಾಗಿದೆ. ಈಗಾದರೆ ಗ್ಯಾಸ್ ಗೆ ಏನು ಮಾಡಬೇಕು ಎಂಬದು ಗ್ರಾಮಸ್ಥರ ಪ್ರಶ್ನೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ,ಶಿವಕುಮಾರ್ ನಾರ್ವೆ, ವಿಶ್ವನಾಥ, ಆಟೋ ಹರೀಶ್, ಶಾಂತಮ್ಮ, ರತ್ನಮ್ಮ, ಇನ್ನೂ ಮುಂತಾದವರು ಹಾಜರಿದ್ದರು.*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *