ಸಕಲೇಶಪುರ : ತಾಲೂಕು ಯಸಳೂರಿನ ಶ್ರೀ ತೆಂಕಲಗೂಡು ಬೃಹನ್ಮಠದಲ್ಲಿ ವಾಗ್ಭೂಷಣ ರತ್ನ ಲಿಂಗೈಕ್ಯ ಷ.ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 6 ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಷ.ಬ್ರ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಆರನೇ ವರ್ಷದ ಗುರು ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಎಪ್ರಿಲ್ 29ರಂದು ಬುಧವಾರ ಭಕ್ತ ಭಾವದಿಂದ ನಡೆಯಲಿದೆ ಎಂದು ಮಠದ ಮಠಾಧ್ಯಕ್ಷರಾದ ಶ್ರೀ ಷ. ಬ್ರ. ಚನ್ನ ಸಿದ್ದೇಶ್ವರ ಶಿವಾಜಿಯರ ಸ್ವಾಮೀಜಿ ಅವರು ತಿಳಿಸಿದರು.

ಈ ಕಾರ್ಯಕ್ರಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನದೀಶ್ವರ 1008ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ದಿವ್ಯ ಸಾನಿಧ್ಯವನ್ನು ದಯಪಾಲಿಸುವರು ಇದೇ ಸಂದರ್ಭದಲ್ಲಿ ಶ್ರೀಮದ್ ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ವೀರಶೈವ ಪಂಚಸೂತ್ರೀಯ ಪ್ರವಚನ ಗ್ರಂಥ ವೀರಶೈವ ಪದದರ್ಶನ ಹಾಗೂ ಸಿದ್ಧಾಂತ ಶಿಖಾಮಣಿ ಪ್ರಭೇ ಕೃತಿಗಳು ಲೋಕಾರ್ಪಣೆಗೊಳ್ಳುವವು. ಇದೇ ಸಂದರ್ಭದಲ್ಲಿ ಶಿವ ದೀಕ್ಷ ಕಾರ್ಯಕ್ರಮ ಸಂಪನ್ನಗೊಳ್ಳುವುದು. ಪರಮಪೂಜ್ಯ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಪರಮಪೂಜ್ಯ ಮಹಾ ಸಂವಿಧಾನಗಳ ಇಷ್ಟು ಲಿಂಗ ಮಹಾಪೂಜೆ ನೆರವೇರಿದ ನಂತರ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮವು ಮಹಾ ಸನ್ನಿಧಿಯವರ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲ ಸದ್ಭಕ್ತಾದಿಗಳು ಪಡೆದುಕೊಳ್ಳಬೇಕು ಎನ್ನುವ ಆಶಯವನ್ನು ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಬಯಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *