ಹೆತ್ತೂರು : ಗ್ರಾಮದ ಶ್ರೀ ಬಾಲಚಂದ್ರ ಹಾಗೂ ಶ್ರೀಮತಿ ಸುನಂದಾ ದಂಪತಿಗಳ ಎರಡನೇ ಪುತ್ರಿಯಾದ , 26 ವರ್ಷದ ಕುಮಾರಿ ಸಂಗೀತಾ ಎರಡು ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ . ಬಹಳ ಚಟುವಟಿಕೆಯಿಂದ ಇದ್ದ ಈ ಹೆಣ್ಣುಮಗಳು ಹೆತ್ತೂರಿನಲ್ಲಿಯೆ ವಿಧ್ಯಾಭ್ಯಾಸ ಮಾಡಿ ಬಿ.ಎ. ಪದವಿ ಪಡೆದಿದ್ದಾರೆ. ಇವರಿಗೆ ಬಹಳ ವರ್ಷಗಳಿಂದ ಎಡಬಿಡದೆ ಅನಾರೋಗ್ಯ ಕಾಡಿತು. ಸ್ವಾಭಿಮಾನಿ ಸಣ್ಣ ಬೆಳೆಗಾರ ಕುಟುಂಬದ ಇವರು ಹಾಗೂ ಕುಟುಂಬದವರು ಯಾರ ಬಳಿಯೂ ತಮ್ಮ ಸಂಕಷ್ಟ ವನ್ನು ಹೇಳಿಕೊಳ್ಳದೆ ಇದುವರೆವಿಗೂ ತಮ್ಮ ಕೈಮೀರಿ ಚಿಕಿತ್ಸೆ ವೆಚ್ಚ ಭರಿಸಿದ್ದಾರೆ.

ವಿಷಯ ತಿಳಿದು ಇಂದು ಹೆತ್ತೂರು ಹೋಬಳಿ ಬೆಳೆಗಾರರ ಸಂಘದಿಂದ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲು ಹೋದಾಗ ,ಆಕೆ ಬಹಳ ಕೃಶಳಾಗಿರುವುದನ್ನು ಕಂಡು ಮನಸ್ಸಿಗೆ ಬಹಳ ನೋವಾಯಿತು.

ತನಗಾಗಿರುವ ಪರಿಸ್ಥಿತಿಗೆ ಬೇಸರದಿಂದ ಮೌನವಾಗಿ ಕಣ್ಣೀರು ಸುರಿಸುತ್ತಿದ್ದರು. ನಮ್ಮ ಹೃದಯ ಒಡೆದು ಬಾಯಿಗೆ ಬಂದಂತಾಯಿತು. ಬೆಳೆದ ಹೆಣ್ಣುಮಗಳ ಸಂಕಷ್ಥವನ್ನು ಹೇಳಲಿಕ್ಕಾಗದೆ , ನುಂಗಿಕೊಳ್ಳ ಲಾಗದ ಅವರ ಕುಟುಂಬದ ವೇದನೆ ಹೇಳತೀರದಾಗಿದೆ.

ಹಾಸನದ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವ ಕುಟುಂಬಸ್ಥರು ಈಗಾಗಲೆ ಲಕ್ಷಾಂತರ ರೂ ಗಳನ್ನು ಖರ್ಚು ಮಾಡಿದ್ದಾರೆ. ಮುಂದೆ ನಿರಂತರವಾಗಿ ಡಯಾಲಿಸಿಸ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 8 ರಿಂದ 10 ಲಕ್ಷರೂಗಳ ಅಗತ್ಯವಿದೆ.ಸಹೃದಯ ಹೆತ್ತೂರಿನ ಅಣ್ಣ ತಮ್ಮಂದಿರು . ಸಂಘ ಸಂಸ್ಥೆಗಳು ಈಕೆಯ ಮುಂದಿನ ಚಿಕಿತ್ಸೆ ಗಾಗಿ ತಮ್ಮ ಕೈಲಾದ ಧನಸಹಾಯ ನೀಡುವುದರ ಮುಖಾಂತರ ನಮ್ಮಈ ಸಹೋದರಿಗೆ ನೆರವಾಗಬೇಕೆಂದು ಕಳ ಕಳಯಿಂದ ಮನವಿ ಮಾಡುತ್ತಿದ್ದೇವೆ.

ಈ ಕೆಳಗೆ ಸಂಗೀತಾರವರ ಬ್ಯಾಂಕ್ ಖಾತೆ ವಿವರ ನೀಡಲಾಗಿದೆ. sangeetha H. B.ac, no 64122334155IFSC: SBIN0040295SBI Hethur branchphonepay no9380689014

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *