ಸಕಲೇಶಪುರ :- ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದ ಸಕಲೇಶಪುರ ತಾಲ್ಲೂಕು ಉಪಾಧ್ಯಕ್ಷರಾಗಿರುವ ಸುನಿಲ್ ಅವರು ಇಂದು ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು, ಅವರಿಗೆ ಸ್ನೇಹಿತರು, ಅಭಿಮಾನಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ರೈತರ ಪರ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿ ಭಾಗವಹಿಸಿ, ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮನಸ್ಸು ಗೆದ್ದಿರುವ ಸುನಿಲ್ ಅವರು ಸರಳ ವ್ಯಕ್ತಿತ್ವ, ಸ್ನೇಹಪರ ನಡೆ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಧ್ವನಿಯಾಗಿರುವ ಅವರು ಯುವಕರಿಗೂ ಪ್ರೇರಣೆಯಾಗಿದ್ದಾರೆ ಎಂದು ಕರವೇ ಸಕಲೇಶಪುರ ಘಟಕದ ಅಧ್ಯಕ್ಷರಾದ ಗಗನ್ ಹಾಡ್ಲಾಹಳ್ಳಿ ಹೇಳಿದರು .

ಇನ್ನಷ್ಟು ಉತ್ತಮ ಆರೋಗ್ಯ, ಆಯುಷ್ಯ, ಸಂತೋಷ ಹಾಗೂ ಸಮಾಜಸೇವೆಯ ಮೂಲಕ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ಶಕ್ತಿ ದೇವರು ಕರುಣಿಸಲಿ ಎಂದು ಕರವೇ ಘಟಕದ ಎಲ್ಲಾ ಪದಾಧಿಕಾರಿಗಳು ಶುಭ ಹಾರೈಸಲಾಗಿದೆ.

ಶುಭ ಕೋರುವವರು :ಕರ್ನಾಟಕ ರಕ್ಷಣಾ ವೇದಿಕೆಸಕಲೇಶಪುರ ಘಟಕ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *