
ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ ‘ಶಕ್ತಿ ಐಪಿಎಸ್’ ಎಂಬ ಧಾರವಾಹಿ ಮೂಲಕ ಅವರು ಕಿರುತೆರೆಗೆ ಭರ್ಜರಿ ಪುನರಾಗಮನ ಮಾಡಿದ್ದಾರೆ.
ಆದರೆ, ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪೊಂದರ ಮೂಲಕ ಸುಕನ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಕುಖ್ಯಾತ ಕಾಡುಗಳ್ಳ ಹಾಗೂ ದಂತಚೋರ ವೀರಪ್ಪನ್, ಸನ್‌ಟಿವಿ ಮತ್ತು ಸುಕನ್ಯಾ ಅವರ ನಡುವಿನ 30 ವರ್ಷಗಳ ಹಳೆಯ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನಿಂದ ಮಹತ್ವದ ಆದೇಶ ಹೊರಬಿದ್ದಿದೆ.
1996ರ ಸಂದರ್ಶನ, ಮಾನಹಾನಿ ಮತ್ತು 30 ವರ್ಷಗಳ ಕಾನೂನು ಸಮರಸನ್‌ಟಿವಿ ಪ್ರಸಾರ ಮಾಡಿದ್ದ ವೀರಪ್ಪನ್ ಸಂದರ್ಶನದಲ್ಲಿ, ವೀರಪ್ಪನ್ ತನ್ನ ವಿರುದ್ದ ಮಾನಹಾನಿಕರ ಹೇಳಿಕೆ ನೀಡಿದ್ದರು ಎಂದು 1996ರಲ್ಲಿ ಸುಕನ್ಯಾ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಚೆನ್ನೈನ ಸಿಟಿ ಸಿವಿಲ್ ನ್ಯಾಯಾಲಯ 2015ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಮೊಕದ್ದಮೆ ಹೂಡಿ 30 ವರ್ಷಗಳ ಬಳಿಕ ಸುಕನ್ಯಾ ಅವರಿಗೆ 10.01 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸನ್‌ಟಿವಿಗೆ ಆದೇಶಿಸಿದೆ.ವರದಿಗಳ ಪ್ರಕಾರ, ವೀರಪ್ಪನ್ ಸುಕನ್ಯಾ ವಿರುದ್ಧ ಮಾಡಿದ್ದ ಮಾನಹಾನಿಕರ ಹಾಗೂ ಅವಹೇಳನಕಾರಿ ಆರೋಪಗಳನ್ನು ಪರಿಶೀಲಿಸುವ ಮತ್ತು ಅವುಗಳನ್ನು ತೆಗೆದುಹಾಕುವ ಸಂಪೂರ್ಣ ಅಧಿಕಾರ ಹಾಗೂ ಅವಕಾಶ ಸನ್‌ಟಿವಿಗೆ ಇತ್ತು. ಆದರೂ ಸಹ, ಸನ್ ಟಿವಿ ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತೀರ್ಪು ನೀಡುವಾಗ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಏನಿದು ಸಂದರ್ಶನ ವಿವಾದ?1 : 996ರಲ್ಲಿ ‘ನಕ್ಕೀರನ್’ ತಮಿಳು ನಿಯತಕಾಲಿಕೆಯ ಸಂಪಾದಕರಾದ ಆರ್. ರಾಜಗೋಪಾಲ್ (ನಕ್ಕೀರನ್ ಗೋಪಾಲ್) ಅವರು ದಟ್ಟ ಕಾಡಿಗೆ ಹೋಗಿ ವೀರಪ್ಪನ್‌ನ ಅತ್ಯಂತ ಪ್ರಸಿದ್ಧ ಹಾಗೂ ವಿಶೇಷ ವಿಡಿಯೋ ಸಂದರ್ಶನವನ್ನು ಮಾಡಿದ್ದರು.
ನಕ್ಕೀರನ್ ಪತ್ರಿಕೆ ಮತ್ತು ಸನ್ ಟಿವಿ ನೆಟ್‌ವರ್ಕ್ ನಡುವೆ ಇದ್ದ ಒಪ್ಪಂದದ ಪ್ರಕಾರ, ಆ ಸಂದರ್ಶನದ ವಿಡಿಯೋ ತುಣುಕುಗಳನ್ನು ಸನ್ ಟಿವಿಗೆ ನೀಡಲಾಗಿತ್ತು. ಅದರಂತೆ, ಸನ್ ಟಿವಿ ವಾಹಿನಿಯು 1996ರ ಏಪ್ರಿಲ್ 17ರಂದು ತನ್ನ ‘ನೆರುಕ್ಕು ನೇರ್’ ಕಾರ್ಯಕ್ರಮದಲ್ಲಿ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಆ ಸಂದರ್ಶನದಲ್ಲಿ ವೀರಪ್ಪನ್ ನಟಿ ಸುಕನ್ಯಾ ಅವರ ವಿರುದ್ಧ ಅವಹೇಳನಕಾರಿ ಸುಳ್ಳು ಆರೋಪಗಳನ್ನು ಮಾಡಿದ್ದರು.
ಸುಕನ್ಯಾ ಅವರ ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ ಸಂದರ್ಶನ ಪ್ರಸಾರವಾಗಿತ್ತು. ಸಂದರ್ಶನದ ಸಂಭಾಷಣೆಯಲ್ಲಿ ವೀರಪ್ಪನ್, ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಗನಿಗೆ ಸಂಬಂಧಿಸಿದ ರಾಜಕೀಯ ಹಗರಣವೊಂದರ ಜೊತೆ ಸುಕನ್ಯಾ ಅವರ ಹೆಸರನ್ನು ಜೋಡಿಸಿದ್ದರು.ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಪ್ರತಿಪಾದಿಸಿದ್ದ ಸುಕನ್ಯಾ, ವೀರಪ್ಪನ್ ಹೇಳಿಕೆ ತನ್ನ ಘನತೆಗೆ ತೀವ್ರ ಧಕ್ಕೆ ತಂದಿದೆ. ಸ್ನೇಹಿತರು, ಕುಟುಂಬ ಹಾಗೂ ಸಾರ್ವಜನಿಕ ವಲಯದಲ್ಲಿ ತನ್ನ ಗೌರವವನ್ನು ಕುಂದಿಸಿವೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
1996ರಲ್ಲಿ ಸುಕನ್ಯಾ ಅವರು, ಸನ್‌ಟಿವಿ, ನಕ್ಕೀರನ್ ಗೋಪಾಲ್ ಮತ್ತು ವೀರಪ್ಪನ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು.ವಿಚಾರಣೆಯ ವೇಳೆ ಪತ್ರಕರ್ತ ಗೋಪಾಲ್ ಅವರು, ತಾವು 9 ಗಂಟೆಗಳ ಸಂಪೂರ್ಣ ಧ್ವನಿಮುದ್ರಣವನ್ನು ಸನ್‌ಟಿವಿಗೆ ನೀಡಿದ್ದು, ಅದರಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ಕತ್ತರಿಸುವ (ಎಡಿಟ್ ಮಾಡುವ) ಸಂಪೂರ್ಣ ಹಕ್ಕು ವಾಹಿನಿಗೆ ಇತ್ತು ಎಂದು ಕೋರ್ಟ್‌ಗೆ ತಿಳಿಸಿದ್ದರು.
ಇದನ್ನು ಪುರಸ್ಕರಿಸಿದ ಚೆನ್ನೈನ ಸಿಟಿ ಸಿವಿಲ್ ನ್ಯಾಯಾಲಯ ಅಂತಿಮವಾಗಿ ಸನ್ ಟಿವಿ ನೆಟ್‌ವರ್ಕ್ ಸಂಸ್ಥೆಯೇ ಈ ಮಾನಹಾನಿಗೆ ಸಂಪೂರ್ಣ ಹೊಣೆ ಎಂದು ತೀರ್ಪಿತ್ತು, 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿತ್ತು.ಇದರ ವಿರುದ್ದ ಸನ್‌ಟಿವಿ ನೆಟ್‌ವರ್ಕ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.ಸುಕನ್ಯಾ ಸಿನಿಮಾ ಪಯಣನಟಿ ಸುಕನ್ಯಾ ಅವರು ಖ್ಯಾತ ತಮಿಳು ನಿರ್ದೇಶಕ ಭಾರತಿರಾಜ ಅವರ ‘ಪುದು ನೆಲ್ಲು ಪುದು ನಾತು’ (1991) ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅದೇ ವರ್ಷ, ಅವರು ಮಲಯಾಳಂ ನಿರ್ಮಾಪಕ-ನಿರ್ದೇಶಕ ಆಲಪ್ಪುಝ ಅಶ್ರಫ್ ನಿರ್ದೇಶನದ ‘ಎಮ್‌ಜಿಆರ್ ನಗರಿಯಲ್ಲಿ’ ಮುಖ್ಯ ಪಾತ್ರದಲ್ಲಿ ನಟಿಸಿದರು; ಇದು ಸಿದ್ದಿಕ್-ಲಾಲ್ ಜೋಡಿಯ ಬ್ಲಾಕ್‌ಬಸ್ಟರ್ ಕಾಮಿಡಿ ಥ್ರಿಲ್ಲರ್ ಮಲಯಾಳಂ ಚಿತ್ರ ‘ಇನ್ ಹರಿಹರ್ ನಗರ’ (1990) ಚಿತ್ರದ ತಮಿಳು ರಿಮೇಕ್ ಆಗಿತ್ತು.1992ರಲ್ಲಿ ಸುಕನ್ಯಾ ಅವರ ವೃತ್ತಿಜೀವನವು ಭಾರಿ ಯಶಸ್ಸನ್ನು ಕಂಡಿತು.
ವಿಜಯಕಾಂತ್ ನಾಯಕತ್ವದ ‘ಚಿನ್ನ ಗೌಂಡರ್’ ಚಿತ್ರದ ಅತ್ಯುತ್ತಮ ನಟನೆಗಾಗಿ ಅವರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು (ಅತ್ಯುತ್ತಮ ನಟಿ) ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲದೆ, ಅದೇ ವರ್ಷ ರೆಹಮಾನ್ ನಟನೆಯ ‘ಅಪಾರಥಾ’, ಜಗಪತಿ ಬಾಬು ಅವರ ‘ಪೆದ್ದರಿಕಂ’ ಮತ್ತು ವಿ. ರವಿಚಂದ್ರನ್ ಅವರ ‘ಗುರು ಬ್ರಹ್ಮ’ ಚಿತ್ರಗಳ ಮೂಲಕ ಕ್ರಮವಾಗಿ ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.ಆ ನಂತರ ಸುಕನ್ಯಾ ಅವರ ವೃತ್ತಿಜೀವನವು ಉತ್ತುಂಗಕ್ಕೇರಿತು. ಅವರು ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ಹಲವು ಪ್ರಮುಖ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದರು.
