
ಸಕಲೇಶಪುರ : ಸನಾತನ ಸೇವಾ ಟ್ರಸ್ಟ್ (ರಿ) ಇವರ ವತಿಯಿಂದ ಮೋದಿ ಅವರು ಪ್ರಧಾನಿಯಾಗಿ ಸುದೀರ್ಘ ಆಡಳಿತ ನಡೆಸುತ್ತಿರುವ ಹಿನ್ನಲೆ ಸಕಲೇಶಪುರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ಅವರ ಹೆಸರಿನಲ್ಲಿ ವಿಶೇಷ ಪೂಜಾ ಸಲ್ಲಿಸಿದರು.
ನಂತರ, ಹಾಸನದ ಹನುಮಂತಪುರದಲ್ಲಿ ಇರುವ ತೇಜೋದೆಯಾ ನಿರಾಶ್ರಿತರ ವೃದ್ಧಾಶ್ರಮಕ್ಕೆ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿದರು.
ಟ್ರಸ್ಟಿನ ಸದಸ್ಯರಾದ ಕುಸುಮ ಭೂಪಾಲ್ ರವರ ಸಹಾಯ ಹಸ್ತದೊಂದಿಗೆ ಆಶ್ರಮಕ್ಕೆ ದಿನಸಿ ಪಧಾರ್ಥ ಹಾಗೂ ದಿನಬಳಕೆ ವಸ್ತುಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಆರ್ .ಬಾಲರಾಜು, ಪ್ರಧಾನ ಕಾರ್ಯದರ್ಶಿ ಸಂದೇಶ್, ಉಪಾಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ರುದ್ರೇಶ್ ಶೆಟ್ಟಿ, ಚಂಪಕನಗರ ರಘು,ಮಂಜುನಾಥ್ ಸಂಗಿ ಸೇರಿದಂತೆ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.



