ಸಕಲೇಶಪುರ: ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸಕಲೇಶಪುರ ಉಪವಿಭಾಗದ ಆದೇಶ ಸಂಖ್ಯೆ ಸ.ಅ.ಸಂ./ಸಕಪು/ಒತ್ತುವರಿ/ಅ.ಮೊ.270/21-22, ದಿನಾಂಕ 22-06-2026ರ ಅನ್ವಯ, ಸೆಕ್ಷನ್-4ರ ಮರಗಡಿ ಸರ್ವೇ ನಂ.54ರಲ್ಲಿ ಅಚ್ಚನಹಳ್ಳಿ ನಿವಾಸಿ ಅನಿಲ್ ಕುಮಾರ್ ಬಿನ್ ಬುಕ್ಕೆಗೌಡ ಅವರು ಒತ್ತುವರಿ ಮಾಡಿಕೊಂಡಿದ್ದ ಸುಮಾರು 10 ಎಕರೆ ಅರಣ್ಯ ಪ್ರದೇಶವನ್ನು ತೆರವುಗೊಳಿಸುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಯಿತು.

ಒತ್ತುವರಿ ಪ್ರದೇಶದಲ್ಲಿ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆ ಬೆಳೆಗಳನ್ನು ಬೆಳೆಸಲಾಗಿತ್ತು. ವಲಯ ಅರಣ್ಯಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಅರ್ಜುನ್, ಮಂಜುನಾಥ್, ಮಹದೇವ್ ಹಾಗೂ ಧನಂಜಯ್, ಗಸ್ತು ಅರಣ್ಯ ಪಾಲಕರಾದ ಉಮೇಶ್, ಯೋಗೇಶ್, ದೇವರಾಜ್, ದೇವೇಂದ್ರ ಹಾಗೂ ಕುಮಾರ್, ಜೊತೆಗೆ ಆರ್‌ಆರ್‌ಟಿ ಸಿಬ್ಬಂದಿಗಳಾದ ಸೋಮಶೇಖರ್, ಮದನ್ ಮತ್ತು ಸುಧೀಶ್ ಅವರುಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕಾರ್ಯಾಚರಣೆಯ ವೇಳೆ ಒತ್ತುವರಿ ಪ್ರದೇಶದ ಹದ್ದುಬಸ್ತು ಗುರುತಿಸಿ, ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಅರಣ್ಯ ಭೂಮಿಯನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *