ಪ್ರಧಾನಿ ನರೇಂದ್ರ ಮೋದಿ ಅಮರಿಕ ಪ್ರವಾಸ ಮುಗಿಸಿ ತವರಿಗೆ ವಾಪಸ್ ಆದ ಬೆನ್ನಲ್ಲೇ ನ್ಯೂಯಾರ್ಕ್‌ ಮೇಯರ್ ಮಹತ್ವದ ಘೋಷಣೆ ಮಾಡಿದ್ದಾರೆ. ನ್ಯೂಯಾರ್ಕ್ ಶಾಲೆಗಳಿಗೆ ಹಿಂದೂಗಳ ದೀಪಾವಳಿ ಹಬ್ಬಕ್ಕೆ ಸರ್ಕಾರಿ ರಜೆ ಘೋಷಿಸಲಾಗಿದೆ.

ನ್ಯೂಯಾರ್ಕ್ ಮೇಯರ್ ಎರಿಕ್ ಆಯಡಮ್ಸ್ ಈ ಘೋಷಣೆ ಮಾಡಿದ್ದಾರೆ. ನ್ಯೂಯಾರ್ಕ್ ಎಲ್ಲಾ ಶಾಲೆಗಳಿಗೆ ದೀಪಾವಳಿ ಹಬ್ಬದ ದಿನ ಸರ್ಕಾರಿ ರಜೆ ಎಂದು ಘೋಷಣೆ ಮಾಡಿದ್ದಾರೆ. ಎಲ್ಲಾ ಸದಸ್ಯರ ಒಮ್ಮತ ನಿರ್ಧಾರ ಮೇರೆಗೆ ಈ ಆದೇಶ ನೀಡಲಾಗಿದೆ ಎಂದು ಎರಿಕ್ ಆಯಡಮ್ಸ್ ಹೇಳಿದ್ದಾರೆ. ಆದರೆ ಸರ್ಕಾರಿ ರಜೆ ಘೋಷಿಸಿದರೂ ನ್ಯೂಯಾರ್ಕ್ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಕಾರಣ ಈ ಬಾರಿ ದೀಪಾವಳಿ ಹಬ್ಬ ನವೆಂಬರ್ 12 ರಂದ ಆಚರಿಸಲಾಗುತ್ತಿದೆ. ಇದು ಭಾನುವಾರವಾಗಿದೆ.

ಹಲವು ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ರಜೆ ನೀಡಬೇಕು ಅನ್ನೋ ಆಗ್ರವಿತ್ತು. ಕತ್ತಲನ್ನು ಹೊಡೆದೋಡಿಸಿ ದೀಪದ ಜ್ಞಾನ ಬೆಳಗುವ ದೀಪಾವಳಿ ಹಬ್ಬವನ್ನು ವೈಟ್ ಹೌಸ್ನಲ್ಲಿ ಆಚರಿಸಲಾಗಿತ್ತು. ಇದೀಗ ಬಹುದಿನಗಳ ಬೇಡಿಕೆಯನ್ನು ಪೂರೈಸಲಾಗಿದೆ ಎಂದು ಏರಿಕ್ ಆಯಡಮ್ಸ್ ಹೇಳಿದ್ದಾರೆ.

ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್ ಸೇರಿದಂತೆ ಅಮೆರಿಕದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇದೀಗ ದೀಪಾವಳಿ ನ್ಯೂಯಾರ್ಕ್ ಹಬ್ಬವಾಗಿದೆ ಎಂದು ಏರಿಕ್ ಆಯಡಮ್ಸ್ ಹೇಳಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ನ್ಯೂಯಾರ್ಕ್ ನಗರದಲ್ಲಿ ನಲೆಸಿರುವ ಹಿಂದೂ, ಸಿಖ್, ಬೌದ್ಧರು, ಜೈನರು ದೀಪಾವಳಿ ಹಬ್ಬ ಆಚರಿಸುತ್ತಾರೆ. ಇದರೊಂದಿಗೆ ಅಮೆರಿಕ ನಿವಾಸಿಗಳು ದೀಪಾವಳಿ ಆಚರಿಸುತ್ತಾರೆ.

ಕಳೆದ ತಿಂಗಳು ನ್ಯೂಯಾರ್ಕ್ ಸ್ಟೇಸ್ ಲೆಜಿಸ್‌ಲೇಟರ್ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಬೇಕೆಂಬ ಒಮ್ಮತದಿಂದ ಸಹಿ ಹಾಕಿ ಬಿಲ್ ಪಾಸ್ ಮಾಡಿದ್ದರು. ಇದೀಗ ಘೋಷಣೆ ಹೊರಬಿದ್ದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *