
ನವದೆಹಲಿ : ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮೇಲಿನ ಜಿಎಸ್‌ಟಿಯನ್ನ ಸರ್ಕಾರ ಕಡಿಮೆ ಮಾಡಿದೆ. ಈಗ ಗ್ರಾಹಕರು ಇವುಗಳನ್ನ ಖರೀದಿಸಲು 31.3 ಪ್ರತಿಶತ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ. ವಾಷಿಂಗ್ ಮೆಷಿನ್, ಮೊಬೈಲ್ ಫೋನ್, ರೆಫ್ರಿಜರೇಟರ್, ಗೃಹೋಪಯೋಗಿ ವಸ್ತುಗಳು, ಯುಪಿಎಸ್ ಮತ್ತಿತರ ಎಲೆಕ್ಟ್ರಾನಿಕ್ಸ್, ಸರಕುಗಳು ಇತ್ಯಾದಿಗಳ ಮೇಲಿನ ಜಿಎಸ್‌ಟಿಯನ್ನ ಸರ್ಕಾರ ಇಳಿಸಿದ್ದು, ಸಾಮಾನ್ಯ ಜನರಲ್ಲಿ ಮಂದಹಾಸ ಮೂಡಿಸಿದೆ.
ಈ ಮೊದಲು, ಗ್ರಾಹಕರು ಈ ವಸ್ತುಗಳ ಮೇಲೆ 31.3 ಪ್ರತಿಶತದವರೆಗೆ ಜಿಎಸ್‌ಟಿ ವಿಧಿಸುತ್ತಿದ್ದರು.
ಹೊಸ ಜಿಎಸ್‌ಟಿ ದರಗಳಿಂದ ಟಿವಿ ಖರೀದಿಸುವುದು ಅಗ್ಗವಾಗಿದೆ. 27 ಇಂಚು ಅಥವಾ ಅದಕ್ಕಿಂತ ಕಡಿಮೆ ಗಾತ್ರದ ಟಿವಿಗಳ ಮೇಲೆ ಸರ್ಕಾರವು ಜಿಎಸ್‌ಟಿಯನ್ನ ಶೇಕಡಾ 31.3 ರಿಂದ ಶೇಕಡಾ 18ಕ್ಕೆ ಇಳಿಸಿದೆ. ಆದಾಗ್ಯೂ, ಹೆಚ್ಚಿನ ಸ್ಮಾರ್ಟ್ ಟಿವಿಗಳು 32 ಇಂಚುಗಳು ಅಥವಾ ಅದಕ್ಕಿಂತ ಹೆಚ್ಚಿನ ಪರದೆಯ ಗಾತ್ರವನ್ನ ಹೊಂದಿರುವುದರಿಂದ ಮತ್ತು ಇನ್ನೂ 31.3 ಪ್ರತಿಶತ ಜಿಎಸ್‌ಟಿಯನ್ನ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಇದರ ಪ್ರಯೋಜನವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಚಿಕ್ಕ ಟಿವಿ ಬಯಸಿದರೆ, ನೀವು ಸ್ವಲ್ಪ ಹಣವನ್ನ ಉಳಿಸಬಹುದು. ಆದರೆ ದೊಡ್ಡ ಟಿವಿ ಬೇಕಾದ್ರೆ ಮೊದಲಿನಂತೆ ಜಿಎಸ್‍ಟಿ ಕಟ್ಟಬೇಕು.
ಸರ್ಕಾರ ಮೊಬೈಲ್ ಫೋನ್’ಗಳ ಮೇಲಿನ ಜಿಎಸ್‌ಟಿಯನ್ನ ಕಡಿಮೆ ಮಾಡಿದೆ ಮತ್ತು ಗ್ರಾಹಕರಿಗೆ ಅಗ್ಗವಾಗಿದೆ. ಈ ಹಿಂದೆ, ಗ್ರಾಹಕರು ಮೊಬೈಲ್ ಫೋನ್ ಖರೀದಿಸುವಾಗ 31.3 ಪ್ರತಿಶತ ಜಿಎಸ್‌ಟಿ ಪಾವತಿಸಬೇಕಾಗಿತ್ತು. ಈಗ ಅದನ್ನ ಶೇ 12ಕ್ಕೆ ಇಳಿಸಲಾಗಿದೆ. ಇದು ಮೊಬೈಲ್ ಫೋನ್ ಕಂಪನಿಗಳು ತಮ್ಮ ಫೋನ್’ಗಳ ಬೆಲೆಯನ್ನ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಫ್ಯಾನ್, ಕೂಲರ್, ಗೀಸರ್ ಮೊದಲಾದ ಗೃಹೋಪಯೋಗಿ ವಸ್ತುಗಳು ಕೂಡ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.
