ಸ.ಪ.ಪೂ.ಕಾಲೇಜು ಸಕಲೇಶಪರ ಇಲ್ಲಿನ ಪ್ರೌಢಶಾಲಾ ವಿಭಾಗದ ಕಟ್ಟಡವು ಸುಮಾರು 1947ರಲ್ಲಿ ಅಂದಾಜು ನಿರ್ಮಾಣವಾಗಿದ್ದು, ಸುಮಾರು 75 ವರ್ಷಗಳು ಕಳೆದಿರುತ್ತದೆ.

ಒಳಭಾಗದ ಕಟ್ಟಡದ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಮತ್ತು ಶಾಲೆಯ ಎಲ್ಲಾ ಕೊಠಡಿಗಳ ಮೇಲ್ಟಾವಣೆ ಪದೇ ಪದೇ ದುರಸ್ಥಿಗೆ ಒಳಗಾಗುತ್ತಿದ್ದು, ಎಷ್ಟೇ ಸಣ್ಣ ಪುಟ್ಟ ದುರಸ್ಥಿ ಮಾಡಿಸಿದರೂ ಮಲೆನಾಡು ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ಹಾಳಾಗುತ್ತಿರುತ್ತದೆ.

ಅಲ್ಲದೇ ನಮ್ಮ ಶಾಲೆಯು ತಾಲ್ಲೂಕಿನ ಪಟ್ಟಣದ ಹೃದಯಭಾಗವಾದ ಬಿ.ಎಂ ರಸ್ತೆಯ ಪಕ್ಕದಲ್ಲಿದ್ದು , ಪ್ರತೀ ವರ್ಷ ವಿದ್ಯಾರ್ಥಿಗಳ ದಾಖಲಾತಿ ಮತ್ತು ಫಲಿತಾಂಶ ಗಣನೀಯವಾಗಿ ಹೆಚ್ಚುತ್ತಿದ್ದು, ಇಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮಗಳ ತರಗತಿಗಳನ್ನು ನಡೆಸಲಾಗುತ್ತಿದೆ.

2017-18 ನೇ ಸಾಲಿನಿಂದ ಈ ಶಾಲೆಯು ಟಾಲ್ಸ್ ಶಾಲೆಯಾಗಿ ಆಯ್ಕೆಯಾಗಿದ್ದು, ಕಂಪ್ಯೂಟರ್, ಪ್ರೊಜೆಕ್ಟರ್ ಇತ್ಯಾದಿ ಬೆಲೆಬಾಳುವ ವಸ್ತುಗಳ ಸುರಕ್ಷತೆ ಮತ್ತು ಭದ್ರತೆ ನೀಡಬೇಕಾಗಿರುತ್ತದೆ.

ಅಲ್ಲದೆ, ತಾಲ್ಲೂಕು ಕೇಂದ್ರದಲ್ಲಿ ನಮ್ಮ ಶಾಲೆ ಇರುವುದರಿಂದ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಮೊರಾರ್ಜಿ, ನವೋದಯ, ಎನ್.ಎಂ.ಎಂ.ಎಸ್ ಮತ್ತು ಎನ್.ಟಿ.ಎಸ್.ಸಿ ಹಾಗೂ ಕೆ.ಪಿ.ಎಸ್.ಇ ಇಂದ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಯುತ್ತಿರುತ್ತದೆ.

ಆದ ಕಾರಣ ಈ ನಮ್ಮ ಶಾಲೆಗೆ ಹೊಸ ಕಟ್ಟಡ ನಿರ್ಮಾಣ, ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಹಾಗೂ ಶಾಲಾ ಆವರಣಕ್ಕೆ ಸುಸಜ್ಜಿತವಾದ ಕಾಂಪೌಂಡ್ ಗೋಡೆನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *