ಕಳೆದ ಹಲವು ವರ್ಷದಿಂದ ನಮ್ಮ ಸಕಲೇಶಪುರದ ದೊಣಿಗಲ್ ನಲ್ಲಿ ಗುಡ್ಡ ಮತ್ತು ರಾಷ್ಟ್ರೀಯ ಹೆದ್ದಾರಿ ಕುಸಿಯುತ್ತಿದ್ದು ಇದುವರೆಗೆ ಯಾವುದೇ ರೀತಿಯ ಸೂಕ್ತ ಕ್ರಮ ಸರ್ಕಾರ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಗಲಿ ಕೈಗೊಂಡಿಲ್ಲ.

ಅದರ ನಡುವೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ನಿಮಿತ್ತ ಸಕಲೇಶಪುರದ ಹೃದಯ ಭಾಗವನ್ನೇ ಯಂತ್ರೋಪಕರಣಗಳ ಸಹಾಯದಿಂದ ಗುಡ್ಡಗಳನ್ನು ಬಗೆದಿರುವ ಕಾರಣ ಚಂಪಕ ನಗರ ಆನೆಮಹಲ್ ಸುತ್ತಮುತ್ತ ಗುಡ್ಡ ಕುಸಿಯುವ ಸಂಭವ ಇದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ಇಲ್ಲಿ ಶಾಲೆ/ಕಾಲೇಜ್ ಗೆ ತೆರಳುವ ವಿಧ್ಯಾರ್ಥಿಗಳಿಗೆ ತೊಂದರೆ ಆಗುವುದು ಕಟ್ಟಿಟ್ಟ ಬುತ್ತಿ. ಹಾಗೇ ವಾಹನ ಸವಾರರಿಗೆ ಅಪಘಾತ ಕೂಡ ಕಟ್ಟಿಟ್ಟ ಬುತ್ತಿಯೆ..! ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳ ತೀರದು. ಇನ್ನೂ ಹೇಳಲು ಹಲವಿದೆ ಸದ್ಯಕ್ಕೆ ಇಷ್ಟು ಸಾಕು. ನಾವು ಹೇಳಿದ ಭವಿಷ್ಯ ನಿಜವಾಗಬಾರದೆಂಬ ಆಶಯ ನಮ್ಮದು.

ಈ ಬಾರಿ ಶಿರಾಡಿ ಘಾಟ್ ಬಂದ್ ಆಗಬಾರದೆಂಬ ಆಶಯ ನಮ್ಮದು. ಅಕಸ್ಮಾತ್ ಬಂದ್ ಆದರೆ ಇದಕ್ಕೆ ಹಾಸನ ಜಿಲ್ಲಾಡಳಿತವೇ ನೇರ ಹೊಣೆ ಸಾಗರ್ ಜಾನೆಕೆರೆ ಮಲೆನಾಡು ರಕ್ಷಣಾ ಸೇನೆ ಕರ್ನಾಟಕ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *