ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮನಹಳ್ಳಿ ಗ್ರಾಮದ ಪುನೀತ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಹಾಸನ: ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮನಹಳ್ಳಿ ಗ್ರಾಮದ ಪುನೀತ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಪುನೀತ್ ಅಕ್ರಮವಾಗಿ ಮರ ಕಡಿದ ಕೇಸ್​ನ ಆರೋಪಿಯಾಗಿದ್ದಾನೆ.

ಈ ಹಿನ್ನಲೆ ಅರಣ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಪುನೀತ್​ ಒಂದೂವರೆ ಲಕ್ಷ ಹಣ ನೀಡಿದ್ದಾನೆಂದು ಪುನೀತ್ ಸಂಬಂಧಿಕರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಸೋಷಿಯಲ್ ಗಾರ್ಡ್​ಗೆ ಹಣ ನೀಡಿದ ಆರೋಪಅರಣ್ಯ ಇಲಾಖೆಯ ಸೋಷಿಯಲ್ ಗಾರ್ಡ್ ಆಗಿರುವ ಪರಮೇಶ್ ಎಂಬಾತನಿಗೆ ಪುನೀತ್​ ಹಣ ನೀಡಿದ್ದಾನೆಂದು ಆತನ ಸಂಬಂಧಿಕರು ಆರೋಪಿಸಿದ್ದು, ಅದರ ಜೊತೆಗೆ ಹಣ ನೀಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಈ ಹಿನ್ನಲೆ ಸಂಬಂಧಿಕರು ವಿಡಿಯೋ, ಆಡಿಯೋ ಸಮೇತ ಸಕಲೇಶಪುರ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಪುನೀತ್​ಗೆ ಹಾಸನ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *