
ಸಕಲೇಶಪುರ :- ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ನೀಡಿರುವ ಮೊಬೈಲ್ ಗಳನ್ನು ವಾಪಸ್ ಮಾಡಲು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘಟನೆಯ ಸದಸ್ಯರು ಜಮಾಯಿಸಿದ ಘಟನೆ ಸೋಮವಾರ ನಡೆಯಿತು.
ಸರ್ಕಾರ ನೀಡಿರುವ ಮೊಬೈಲ್‌ಗಳಲ್ಲಿ ನೆಟ್‌ವರ್ಕ್, ರಾಮ್, ಸ್ಟೋರೇಜ್ ಸಮಸ್ಯೆ ಇದೆ. ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿಲ್ಲ ಆದ್ದರಿಂದ ಮೊಬೈಲ್‌ಗಳನ್ನು ವಾಪಸ್ ನೀಡಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷೆ ನಾಗಲಕ್ಷ್ಮಿ,ಕಾರ್ಯದರ್ಶಿ ಸುಮಿತ್ರ, ಮುಖಂಡರಾದ ಸೌಮ್ಯ, ಶಾರದ, ನಾಗರತ್ನ ಇತರರು ಭಾಗವಹಿಸಿದ್ದರು.


