
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಪ್ರಾಧಿಕಾರದಿಂದ ಮಾಡಿರುವ ಸರ್ವೀಸ್ ರಸ್ತೆ ಇದೀಗ ಮಳೆಯಿಂದಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ, ವ್ಯವಸ್ಥಿತವಾಗಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಈ ರಸ್ತೆಯನ್ನು ಮಾಡದೇ ಇರುವುದು ಇದ್ದಕೆ ಕಾರಣವಾಗಿದೆ ಎಂದು ಜೆಪಿ ನಗರದ ಗ್ರಾಮಸ್ಥರು ಅದಿಕಾರಿಗಳ ವಿರುದ್ದ ಗರಂ ಆಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆ ದುರಸ್ತಿಮಾಡುವಂತೆ ಆಗ್ರಹಿಸಿದ್ದಾರೆ.




