
ಸಕಲೇಶಪುರ : ಹೆತ್ತೂರು ಹೋಬಳಿಯಲ್ಲಿ ಕೃಷಿ ಅಧಿಕಾರಿ ಕೇಶವಮೂರ್ತಿಯವರಿಂದ ರೈತ ಸಂಪರ್ಕ ಕೇಂದ್ರ ಹೆತ್ತೂರಿನಲ್ಲಿ ರೈತರಿಗೆ ಭತ್ತದಲ್ಲಿ ಬೆಳೆ ವಿಮೆ ಮಾಡಿಸಲು ಮಾಹಿತಿ ನೀಡಿದರು. ಅಲ್ಲದೆ ಎಲ್ಲ ರೈತರು ರೈತರ ಬೆಳೆ ಸಮೀಕ್ಷೆ ಆಪ್ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಿ ಕೊಳ್ಳಬೇಕೆಂದು ತಿಳಿಸಿದರು.
ನಂತರ ಇದುವರೆಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 6000 ಪಡೆಯುತ್ತಿರುವ ರೈತರು ಹೇಗೆ ಕೆ ವೈ ಸಿ ಮಾಡಿಸುವುದು ಕಡ್ಡಾಯ, ಹಾಗಾಗಿ ಈಕೆ ವೈಸಿ ಮಾಡಿಸಿದ ರೈತರು ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಕೃಷಿ ಅಧಿಕಾರಿಯವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಹೆತ್ತೂರಿನ ಅನೇಕ ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.
