
ಸಕಲೇಶಪುರ : ಪಟ್ಟಣದ ಹಿಂದೂ ಮುಕ್ತಧಾಮದ ಆವರಣದಲ್ಲಿ ಗಿಡ ಸ್ವಚ್ಛಗೊಳಿಸಿ ನಂತರ ಹಣ್ಣಿನ ಗಿಡಗಳು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಧೆ ಅಧ್ಯಕ್ಷೆ ಬಬಿತಾ ವಿಶ್ವನಾಥ್ ಲಯನ್ಸ್ ಜಿಲ್ಲೆ ವತಿಯಿಂದ ನವೀಕರಣಗೊಂಡ ಮುಕ್ತಿಧಾಮದ ಆವರಣ ಸ್ವಚ್ಚಗೊಳಿಸುವ ಹೊಣೆ ಸ್ಧಳೀಯ ಲಯನ್ಸ್ ನಿರ್ವಹಿಸುತ್ತಿದೆ. ಹಾಗೇನೆ ಮುಕ್ತಿಧಾಮದ ಆವರಣದಲ್ಲಿ (ಹೇಮಾವತಿ ನದೀ ತೀರ) ಈ ದಿನ ಹಲಸು,ನೇರಳೆ ಸೇರಿದಂತೆ ಹಣ್ಣಿನ ಗಿಡಗಳು ನೆಡಲಾಗಿದೆ ಮುಂದೆ ಈ ಗಿಡಗಳ ಪೋಷಣೆ ಕೂಡ ಸಂಸ್ಧೆ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೀನಾಕ್ಷಿಖಾದರ್, ಖಜಾಂಜಿ ಬಸವರಾಜ್,ವಲಯಾಧ್ಯಕ್ಷ ಸಿ.ಪಿ.ಪ್ರಸನ್ನಕುಮಾರ್,ರೀಜನ್ ಅಂಬಾಸಡರ್ ಡಾ.ನವೀನ್ ಚಂದ್ರಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಖಾದರ್, ಜಯಶಂಕರ್ ಇನ್ನಿತರರು ಭಾಗವಹಿಸಿದರು.



