
ಚಿಕ್ಕಮಗಳೂರು : ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಆದೇಶ ಜಾರಿ ಮಾಡಲಾಗಿದೆ. ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಈ ಬ್ಗಗೆ ಸೂಚನೆಯನ್ನು ಈಗಾಗಲೇ ಹೊರಡಿಸಿದೆ.
ಚಿಕ್ಕಮಗಳೂರು ತಾಲೂಕಿನ ಬಿಂಡಿಗ ದೇವೀರಮ್ಮನ ದೇವಾಲಯದಲ್ಲಿ ಈ ರೀತಿ ಡ್ರೆಸ್ ಕೊಡ್ ಇದ್ದವರು ಮಾತ್ರ ಆಗಮಿಸಬಹುದು ಎಂದು ಹೇಳಲಾಗಿದೆ.ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ಗಮನಿಸಿ.
ಯಾವ ರೀತಿಯ ಉಡುಪನ್ನು ನೀವು ಧರಿಸಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಈ ರೀತಿ ಉಡುಪು ಧರಿಸುವಂತಿಲ್ಲ ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಎಂಬ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ.
ಸಾಂಪ್ರದಾಯಿಕ ಉಡುಗೆಯನ್ನು ಮಾತ್ರ ತೊಟ್ಟು ಆಗಮಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಗೂ ನಿಷೇಧ ಮಾಡಲಾಗಿದೆ. ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡ್ತಾರೆ.
ಆ ಸಂದರ್ಭದಲ್ಲಿ ಹೆಚ್ಚಿನ ಜನರು ಫೋಟೋ ತೆಗೆಯುತ್ತಾರೆ ಅಥವಾ ಮಾತನಾಡುತ್ತಾರೆ. ಇದರಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿತ್ತು. ಅದರ ಸಲುವಾಗಿ ಈಗ ಮೊಬೈಲ್ ಅನ್ನೂ ಸಹ ಈಗ ನಿಷೇಧ ಮಾಡಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ ಆದರೆ ಡ್ರೆಸ್ ಕೋಡ್ ಇರಲಿಲ್ಲ.
ಮದ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಮಕ್ಕಳಿಂದ-ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರು ಬರ್ತಾರೆ, ಅವರಲ್ಲಿ ಪ್ರೇಮಿಗಳು ಇರ್ತಾರೆ ಇದರಿಂದಾಗಿ ಈಗ ಹೊಸ ನಿಯಮವನ್ನು ಎಲ್ಲರೂ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ಹೊರಡಿಸಿದೆ. ನೀವು ಸೀರೆ ಲಂಗಾ ದಾವಣಿ ಅಥವಾ ಉದ್ದ ತೋಳಿನ ಚೂಡಿದಾರ್ ವಿತ್ ಶಾಲ್ ಅಲ್ಲಿಗೆ ಹೋಗಬಹುದು. ಹೊರತಾಗಿ ಬೇರೆ ರೀತಿಯ ಬಟ್ಟೆ ಧರಿಸುವಂತಿಲ್ಲ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್ ಗೆ ಅವಕಾಶವಿಲ್ಲ ಎಂದು ಸಂದೇಶ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ದೇವೀರಮ್ಮ ದೇಗುಲ ಈಗ ಈ ನಿಯಮಗಳಿಂದ ಕೂಡಿದೆ.
