
ಸಕಲೇಶಪುರ : ತಾಲ್ಲೂಕಿನ ಬಾಳ್ಳುಪೇಟೆಯ ರಾಷ್ಟ್ರೀಯಹೆದ್ದಾರಿಗೆ ಸರ್ವಿಸ್ ರೋಡ್ ಮಾಡುವಂತೆ ಒತ್ತಾಯಿಸಿ ಸೋಮವಾರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಾಳ್ಳುಪೇಟೆಯ ಸಿದ್ದಣ್ಣಯ್ಯ ಪ್ರೌಢಶಾಲೆಯಿಂದ ಜೆ ಪಿ ನಗರದವರೆಗೆ ಕೂಡಲೇ ಸರ್ವಿಸ್ ರಸ್ತೆ ಮಾಡಬೇಕು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಪಕ್ಕದಲ್ಲಿ ,ಸಿದ್ದಣ್ಣಯ್ಯ ಶಾಲೆ, ವಿವೇಕಾನಂದ ಶಾಲೆ ,ಬ್ಲಾಸಮ್ ಶಾಲೆಗಳು ಇದ್ದು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ತಿರುಗಾಡಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆಯನ್ನು ಮಾಡಿಸುವಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು ಅವರಿಗೆ ಮನವಿ ಮಾಡಲಾಯಿತು.
ನಂತರ ಶಾಸಕರು ರಾಷ್ಟ್ರೀಯ ಹೆದ್ದಾರಿ ಇಂಜಿನೀಯರ್ ಅವರಿಗೆ ದೂರವಾಣಿ ಕರೆಮಾಡಿ ಕೂಡಲೇ ಸರ್ವಿಸ್ ರಸ್ತೆಯನ್ನು ಮಾಡುವಂತೆ ಸೂಚನೆ ನೀಡಿದರು.
