
ಸಕಲೇಶಪುರ : ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ, ಅವಮಾನ, ಬೆತ್ತಲೆಗೊಳಿಸುವ ವಿಕೃತ ಕೃತ್ಯಗಳು ದೇಶದಲ್ಲಿ ಹೆಚ್ಚಾಗುತ್ತಿರುವುದನ್ನು ನಾವು ತಡೆಯಲು ಮಾಧ್ಯಮಗಳ ಮೂಲಕ ಅಧಿಕಾರದಲ್ಲಿರುವ ಸರ್ಕಾರಕ್ಕೆ ಪೋಲಿಸ್ ಇಲಾಖೆ, ರಾಜಕೀಯ ಮುಖಂಡರುಗಳಿಗೆ ನ್ಯಾಯಾಲಯಗಳಿಗೆ ವಿವಿಧ ಸಂಘಟನೆಗಳಲ್ಲಿ ಮನವಿ ಮಾಡಿಕೊಳ್ಳಬೇಕಾಗಿದೆ ಎಂದು ಮಹಿಳಾ ಮಾರ್ಗದರ್ಶಿ ಅಸೋಯೇಟ್ಸ್ ನ ಅಧ್ಯಕ್ಷೆ ಕಲ್ಪನಾ ಕೀರ್ತಿ ಹೇಳಿದರು
ಮಂಗಳವಾರ ಸಕಲೇಶಪುರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷೆ ಕಲ್ಪನಾ ಕೀರ್ತಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಹಿಳೆಯರ ಬಗ್ಗೆ ಆಲೋಚನೆ, ನಡೆದುಕೊಳ್ಳುವ ರೀತಿ ನೀತಿಗಳನ್ನು ಗಾಳಿಗೆ ತೂರಿ ಬೇಲಿನೇ ಎದ್ದು ಹೊಲ ಮೇಯ್ದಂತೆ ಶಾಲಾ ಪ್ರಿನ್ಸಿಪಾಲರೊಬ್ಬರು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 10 ವರ್ಷದ ಅಪ್ರಾಪ್ತಳ ಮೇಲೆ ಅತ್ಯಾಚಾರ ಮಾಡಿದ್ದು, ಈಗಾಗಲೇ ಬಂದಿಸಲಾಗಿದೆ.
ಈ ತರಹದ ಕೃತ್ಯಗಳು ನಡೆದಾಗ, ಪೋಲಿಸ್ ರವರು ಸುದ್ದಿ ತಿಳಿದ ತಕ್ಷಣಾ ಶೀಘ್ರವಾಗಿ ಆರೋಪಿತರನ್ನು ಬಂದಿಸಬೇಕು, ನ್ಯಾಯಾಲಯದಲ್ಲಿ ಐ.ಪಿ.ಸಿ. ಇಂಡಿಯಾದ ಪೀನಲ್ ಕೋಡಿನಲ್ಲಿ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸುವ ವ್ಯಕ್ತಿಗಳನ್ನು ಗಡಿಪಾರುಮಾಡಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಭಾರತೀಯ ಸಂವಿಧಾನದ ಅಡಿಯಲ್ಲಿ ಮಹಿಳೆಗೆ ಸ್ಥಾನಮಾನ, ಸಮಾನತೆ ನೀಡಿದೆ ಆದರೆ ಅಪಮಾನ ನಿಂದನೆ ನಡೆಸುತ್ತಿರುವ ಅತ್ಯಾಚಾರಕ್ಕೆ ಗುರಿಮಾಡುತ್ತಿರುವ ಕೆಲವೊಂದು ಕ್ರೂರ ಮನಸ್ಥಿತಿಯ ಪುರುಷರನ್ನು ನಿರ್ದಾಕ್ಷಿಣ್ಯವಾಗಿ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಮಹಿಳೆಯ ಮಾನ, ಪ್ರಾಣವನ್ನು ರಕ್ಷಿಸಬೇಕಾಗಿದ್ದು ದೇಶದ ಪ್ರತಿಯೊಬ್ಬ ಉತ್ತಮ ಪುರುಷರ ಜವಾಬ್ದಾರಿಯಾಗಿದೆ ಸರ್ಕರವು ಮತ್ತು ಶಾಲಾ ಕಾಲೇಜುಗಳಲ್ಲಿ ಹಿಂದೂ ಮಹಿಳೆ, ಮುಸ್ಲಿಂ ಮಹಿಳೆ, ಕ್ರಿಶ್ಚಿಯನ್ ಮಹಿಳೆ ಎಂಬ ತಾರಾತಮ್ಯ ತರಬಾರದು ಜರುಗಿಸಬೇಕಾಗಿದೆ. ಉಡುಪಿ ಕಾಲೇಜು ನಲ್ಲಿ ನಡೆದ ಘಟನೆ, ಇವತ್ತಿಗೂ ಕೂಡ ಮಣಿಪುರ ಎಂಬ ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿಯೂ ಎಂ.ಎಲ್.ಎ., ಎಂ ಪಿ, ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ನಮ್ಮ ರಾಜ್ಯದ ಮುಖ್ಯಮಂತ್ರಿ ಯಾವುದೇ ಮಹಿಳೆಯರ ಮಾನ-ಪ್ರಾಣ ಕಾಪಾಡಲು ಅಸಹಾಯಕರಾಗಿದ್ದಾರೆ ಏನು ಅರ್ಥ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ನಂದಿನಿ ಶ್ರೀಕಾಂತ್, ಮಂಜುಳ ಮತ್ತಿತರು ಉಪಸ್ಥಿತರಿದ್ದರು.
