ಸಕಲೇಶಪುರ.ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುನಾನೇಕೆ ಈ ಪುಸ್ತಕವನ್ನು ಬರೆಯುವ ಕೆಲಸಕ್ಕೆ ಕೈಹಾಕಿದೆ ಎಂದು ನಿಮಗೆ ಅಚ್ಚರಿಯಾಗುತ್ತಿರಬಹುದು.

ನನಗೂ ಹಾಗೇ ಅನ್ನಿಸಿದ್ದಂಟು. ಆದರೆ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗಲೆಲ್ಲ ಅದೇಕೋ ಮನಸ್ಸಿನ ನೆಮ್ಮದಿ ಕದಡಿದಂತಾಗಿ ಮನಸ್ಸು ಭಾರವೆನಿಸಿತ್ತು. ಮನಸ್ಸಿನ ಆ ಭಾರವನ್ನು ಇಳಿಸಿಕೊಂಡು ಹಗುರವಾಗಲು ನಾನು ನನ್ನ ಭಾವನೆಗಳನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ಅಲೋಚಿಸಿದಾಗ, ಯಾರೋ ಒಬ್ಬಿಬ್ಬರಲ್ಲಿ ಹೇಳಿಕೊಳ್ಳುವುದಕ್ಕಿಂತ ಮನದ ಅಳಲನ್ನು ಅಕ್ಷರರೂಪಕ್ಕಿಳಿಸಲು ಮುಂದಾದೆ ಎಂದರು.

ನನ್ನ ಹತ್ತಿರದಲ್ಲಿದ್ದೂ ನನ್ನ ಅರ್ಥ ಮಾಡಿಕೊಳ್ಳದಿರುವ ಆತ್ಮೀಯರಿಗೆ ಮನವರಿಕೆ ಮಾಡಿಕೊಡಬಹುದು ಹಾಗೂ ನನ್ನ ದೂರದಿಂದ ನೋಡಿ ಬೆನ್ನಿನ ಹಿಂದೆ ಮಾತನಾಡುವರಿಗೂ ಅರ್ಥವಾಗಲಿ ಎಂದು ಬರೆಯಲು ಪ್ರಾರಂಭಿಸಿದೆ.ನನ್ನ ಬರವಣಿಗೆ ಚಳುವಳಿಗಳ ಆಶಯ, ಉದ್ದೇಶ ಮತ್ತು ಗುರಿ ಎಲ್ಲವೂ ಹಾದಿ ತಪ್ಪುತ್ತಿರುವ ವ್ಯವಸ್ಥೆಯನ್ನು ಒಂದಿಷ್ಟು ಸರಿದಾರಿಗೆ ತರುವ ಪ್ರಯತ್ನವಾಗಿತ್ತು, ಸಾಮಾಜಿಕ ನ್ಯಾಯ, ಸೌಹಾರ್ಧತೆ, ಜೊತೆಗೆ ಅಭಿವೃದ್ಧಿಗಾಗಿ ಬರಹ ಮೀಸಲಾಗಿದ್ದವು. ಕೆಲವು ಸಂದರ್ಭದಲ್ಲಿ ವ್ಯಕ್ತಿ, ಶಕ್ತಿ, ಸಂಘಟನೆಗಳ ಶೋಷಣೆ ಮಿತಿಮೀರಿದಾಗ ನ್ಯಾಯಕ್ಕಾಗಿ ಬರೆಯುವುದರ ಜೊತೆಗೆ ಮಾತನಾಡವುದು, ಬೀದಿಗಿಳಿಯುವುದು ಅನಿವಾರ್ಯವಾಗುತ್ತಿತ್ತು.

ಅನ್ಯಾಯ ಪ್ರಶ್ನಿಸಿದಕ್ಕಾಗಿ ಬಹಳಷ್ಟು ಗಂಡಾಂತರ ಎದುರಿಸ ಬೇಕಾಯಿತು.ನಿರಂತರವಾಗಿ ಸುಳ್ಳು ಕೇಸುಗಳು ದಾಖಲಾದವು.ಒಂದು ವರ್ಗದ ಕೆಲವರು ಸಾರ್ವಜನಿಕ ಸ್ಥಳದಲ್ಲಿ ನನ್ನನ್ನು ಭಯೋತ್ಪಾದಕ, ನಕ್ಸಲ್, ನಕಲಿ ಪತ್ರಕರ್ತ ಎಂದು ತೆಗಳಿದರೆ ಮತ್ತೊಂದು ವರ್ಗದ ಕೆಲವರು ಸಾರ್ವಜನಿಕವಾಗಿ ಹಲ್ಲೆನಡೆಸಿದರು.‌ ನಿರಂತರವಾಗಿ ನಿಂದನೆ ಮತ್ತು ಮಾನಸಿಕ ಹಿಂಸೆಗೆ ಮುಂದಾದರು. ನನ್ನ ಈ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅದೆಷ್ಟೋ ಜನರು ಧರ್ಮ, ವರ್ಗ, ಜಾತಿಯನ್ನು ಲೆಕ್ಕಿಸದೆ ತಮ್ಮ ಸಹಕಾರವನ್ನು ನೀಡುತ್ತ ಬಂದಿರುವುದು ನನಗೆ ನೆಮ್ಮದಿಯ ವಿಷಯವಾಗಿದೆ.

ಮಿತ್ರರಂತೆ ನಟಿಸಿ ವಂಚಿಸುವ ಜನರು ಜೀವನದ ಪಾಠವನ್ನು ಕಲಿಸಿದ್ದಾರೆ ಇದರಿಂದ ಕಷ್ಟಕರ ಸಂದರ್ಭದಲ್ಲೂ ಎಚ್ಚರಿಕೆಯ ಹೆಚ್ಚೆ ಇಡಲು ಸಹಕಾರಿಯಾಗಿದೆ. ಅನ್ಯಾಯದ ವಿರುದ್ಧ ಹೋರಾಡುವ ನನ್ನ ಮನೋಭಾವವನ್ನು ನಾನಂತೂ ಬದಲಿಸಿಕೊಳ್ಳಲಾರೆ. ನಿಮ್ಮನೇಕೆ ಗಡಿಪಾರ್ ಮಾಡಿದರು?-ಎಂದು ಜನ ಕೇಳುವ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನ ನನ್ನಿಂದ ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಕಂಡುಕೊಳ್ಳಲಾಗದ ಉತ್ತರವನ್ನು ಜನರಿಂದಲೇ ಪಡೆಯುವ ಉದ್ದೇಶದಿಂದ ನನ್ನ ಜೀವನದ ಅನೇಕ ಘಟನೆಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಪುಸ್ತಕದ ಮೂಲಕ ಮಾಡಿದ್ದೇನೆ.ನನ್ನ ಬದುಕಿನಲ್ಲಿ ನಡೆದಿರುವ ನೈಜ ಘಟನೆಗಳನ್ನು ಪುಸ್ತಕದ ರೂಪದಲ್ಲಿ ಅನಾವರಣ ಮಾಡಿದ್ದೇನೆ.

ರೌಡಿ ಪದದ ವ್ಯಾಖ್ಯೆಗೆ ಅರ್ಥ ಸಿಕ್ಕರೆ ಹಾಗೂ ಈ ಎಲ್ಲಾ ಘಟನೆಗಳು ಗಡಿಪಾರ್ ಮಾಡಲು ಮಾನದಂಡವಾಗಿದ್ದರೆ ನೀವು ಖಂಡಿತಾ ತಿಳಿಸಬಹುದು. ತಾವುಗಳು ತಪ್ಪದೆ ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬನ್ನಿ ಎಂದು ಅಹ್ವಾನಿಸುತ್ತೇನೆ ಹಾಗೂ ನನ್ನ ಪ್ರೀತಿಸವವರು ಹಾಗೂ ನನ್ನ ಅರ್ಥಮಾಡಿಕೊಳ್ಳದೆ ದ್ವೇಶಿಸುವರು ನನ್ನ ಪುಸ್ತಕ ಓದಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.ಸುದ್ದಿ ಗೋಷ್ಟಿ ಯಲ್ಲಿ ಪತ್ರಕರ್ತ ಮಲ್ನಾಡ್ ಮೆಹಬೂಬ್, ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಪತ್ರಕರ್ತ ಅಕ್ವರ್ ಜುನೈದ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಅಧ್ಯಕ್ಷ ಅರುಣ್ ಗೌಡ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *