
ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಡ್ಲಹಳ್ಳಿ ಹೊರಟ್ಟಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ವಳಲಹಳ್ಳಿ ಕೂಡಿಗೆಯಿಂದ ನಿಡಿಗೆರೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬರುವ ಈ ಊರು ,ವಳಲಹಳ್ಳಿ ಕೂಡಿಗೆಯಿಂದ ಅರ್ಧ ಕಿಲೋಮೀಟರ್ ಅಂತರದಲ್ಲಿರುವ ಈ ಊರಿನ ರಸ್ತೆಯಲ್ಲಿ ತಿರುಗಾಡುವ ಪ್ರತಿಯೊಬ್ಬರೂ ಪ್ರತಿದಿನ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತ ತಿರುಗಾಡುತ್ತಿದ್ದಾರೆ. ಕಾರಣ, ಈ ಹಡ್ಲಹಳ್ಳಿ ಹೊರಟ್ಟಿ ಗ್ರಾಮವು ಎರಡು ದಲಿತ ಕುಟುಂಬ ಸೇರಿದಂತೆ 12 ಕುಟುಂಬಗಳಿದ್ದು ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಸುಮಾರು 45 ರಿಂದ 50 ಮಂದಿ ವಾಸ ಮಾಡುತ್ತಿರುವ ಈ ಗ್ರಾಮದಿಂದ ಪ್ರತಿದಿನ ಈ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪುವ ಚಿಂತೆಯ ಜೊತೆಗೆ ಅವಸರದಲ್ಲಿ ರಸ್ತೆಯಲ್ಲಿ ಇರುವ ಗುಂಡಿಗಳಿಗೆ ಕಾಲು ಹಾಕಿ ಅನಾಹುತ ಮಾಡಿಕೊಳ್ಳುತ್ತೇವೋ ಅಥವಾ ಮಳೆ ನೀರಿನಿಂದ ಗೊಚ್ಚೆ ರಸ್ತೆಯಲ್ಲಿ ಜಾರಿ ಬಿದ್ದು ಬಟ್ಟೆ ಕೊಳೆಯಾಗಿ ಶಾಲೆಗೆ ಹೋಗುವುದು ತಪ್ಪುದೆನೋ ಎಂಬ ಭಯದಲ್ಲಿ ತಿರುಗಾಡುವಂತಾಗಿದೆ.
ವಯಸ್ಸಾದವರು ಹಾಗೂ ಗ್ರಾಮಸ್ಥರು ಅಲ್ಲದೆ ಊರಿಗೆ ಬರುವ ನೆಂಟರು ಸ್ನೇಹಿತರು ಈ ಊರಿಗೆ ಹೋಗುವ ರಸ್ತೆಯನ್ನು ನೋಡಿ ಸ್ಥಳೀಯ ನಾಯಕರಿಗೆ ಹಾಗೂ ಊರಿನ ಮುಖಂಡರಿಗೆ ಬಾಯಿಗೆ ಬಂದಂತೆ ಬೈದು ತಿರುಗಾಡುವಂತಾಗಿದೆ.
ಅಲ್ಲದೆ ಊರಿನವರು ಕೂಡ ತಮ್ಮ ಈ ರಸ್ತೆಯಲ್ಲಿ ತಿರುಗಾಡಲು ಬೇಸರ ವ್ಯಕ್ತಪಡಿಸುವಂತಾಗಿದೆ.ಅಲ್ಲದೆ, ಅಕ್ಕಪಕ್ಕದ ಊರಿನವರು ಈ ರಸ್ತೆಯ ಅಕ್ಕ ಪಕ್ಕದಲ್ಲಿ ತಮ್ಮ ತೋಟಗದ್ದೆಗಳನ್ನು ಹೊಂದಿದ್ದು ಪ್ರತಿದಿನ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಜೊತೆಗೆ ತೋಟ ಗದ್ದೆಗಳಿಗೆ ಬಳಸುವ ಕೃಷಿ ಉಪಕರಣಗಳನ್ನು ಹಾಗೂ ಬೆಳೆಗಳನ್ನು ಸಾಗಿಸಲು ತಮ್ಮ ಸ್ವಂತ ವಾಹನ ಹಾಗೂ ಬಾಡಿಗೆಗೆ ಕರೆತಂದ ವಾಹನದ ಚಾಲಕರಂತೂ ಈ ರಸ್ತೆಯ ವ್ಯವಸ್ಥೆ ನೋಡಿ ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ನಾಯಕರಿಗೆ ಬಾಯಿಗೆ ಬಂದಂತೆ ಬೈಯುತ್ತಾ ವಾಹನ ಚಲಾಯಿಸುವಂತಾಗಿದೆ.
ಇಷ್ಟೆಲ್ಲ ಅವಶ್ಯಕತೆ ಇರುವ ಈ ರಸ್ತೆಗೆ ಸುಮಾರು ಹತ್ತು ವರ್ಷಗಳಿಂದ ಗ್ರಾಮಸ್ಥರು ಆಗಿನ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಾಯಕರ ಜೊತೆ ತಿರುಗಾಡಿ ಮನವಿ ಪತ್ರವನ್ನು ಕೊಟ್ಟರು ಕೂಡ ಯಾವುದೇ ಶಾಸಕರ ಅನುದಾನವಾಗಲಿ, ಈ ಭಾಗಕ್ಕೆ ಲಭಿಸಬೇಕಾಗಿದ್ದ ಎತ್ತಿನಹೊಳೆ ಪ್ರಾಜೆಕ್ಟ್ ನ ಹಣದಿಂದಾಗಲಿ ಡಾಂಬರ್ ರಸ್ತೆ ಹಾಗೂ ಸಿಮೆಂಟ್ ರಸ್ತೆ ಇಲ್ಲದೆ ಜನರು ಪ್ರತಿದಿನ ಹಿಡಿ ಶಾಪ ಹಾಕಿ ರಸ್ತೆಯಲ್ಲಿ ಹೋಗಲು ಪರದಾಡುವಂತಾಗಿದೆ.ಹತ್ತು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ನಾಯಕರಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕೂಡ ಈ ಗ್ರಾಮದ ರಸ್ತೆಯನ್ನು ಮಾಡಿಕೊಳ್ಳಲು ಮುಂದಾಗದೆ ಇರುವುದು ಈಗ ಗ್ರಾಮಸ್ಥರನ್ನು ಆಕ್ರೋಶ ಭರಿತರನ್ನಾಗಿಸಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಆಯ್ಕೆಯಾಗಿರುವ ನೂತನ ಶಾಸಕರ ಸಿಮೆಂಟ್ ಮಂಜಣ್ಣನವರು ಕ್ಷೇತ್ರವಾರು ಜನರ ಸಮಸ್ಯೆಗೆ ಒಳ್ಳೆ ರೀತಿ ಸ್ಪಂದಿಸುತ್ತಿರುವುದು ತಾಲೂಕಿನಾದ್ಯಂತ ಒಳ್ಳೆಯ ಪ್ರಶಾಂಸೆ ವ್ಯಕ್ತಪಡಿಸುತ್ತಿರುವುದರಿಂದ ತಮ್ಮ ಊರಿಗೆ ಇವರಿಂದಲಾದರೂ ಡಾಂಬರ್ ರಸ್ತೆಯ ಭಾಗ್ಯ ಸಿಗುವುದರೊಂದಿಗೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನೆಮ್ಮದಿಯಿಂದ ತಿರುಗಾಡುವಂತಾಗಲೆಂದು ಕನಸು ಹೊತ್ತಿರುವ ಈ ಗ್ರಾಮಸ್ಥರಿಗೆ ನೂತನ ಶಾಸಕರು ರಸ್ತೆ ಮಾಡಿಕೊಡುವ ಮನಸ್ಸು ಮಾಡಲಿ. ಹಾಗೂ ಗ್ರಾಮಸ್ಥರ ಕನಸು ಇವರಿಂದ ನನಸಾಗಲೆಂದು ಎಂದು ಈ ಮೂಲಕ ಆಶಯ ವ್ಯಕ್ತಪಡಿಸುತ್ತೇವೆ.10 ವರ್ಷಗಳಿಂದಲೂ ಆಗಿನ ಶಾಸಕರಿಗೆ ರಸ್ತೆ ಮಾಡಿಕೊಡಿ ಎಂದು ಮನವಿ ಪತ್ರ ಕೊಟ್ಟಿದ್ದರು ಕೂಡ ನಿಮ್ಮ ಊರಿನ ರಸ್ತೆ ಮಾಡಿಕೊಡುತ್ತೇನೆ ಎಂದು ಹೇಳುತ್ತಾ ಬಂದರು ಹೊರತು ಇದುವರೆಗೂ ರಸ್ತೆ ಮಾಡಿಕೊಡಲಿಲ್ಲ. ಈಗಿನ ಶಾಸಕರು ನಮ್ಮ ಊರಿನ ರಸ್ತೆ ಮಾಡಿ ಕೊಟ್ಟು ನಮ್ಮ ರಸ್ತೆಯ ಕನಸನ್ನು ನನಸು ಮಾಡುತ್ತಾರಾ.?
ಹೇಳಿಕೆ….ಉಮೇಶ್ಹಡ್ಲಹಳ್ಳಿ ಹೊರಟ್ಟಿ
ಗ್ರಾಮಸ್ಥರು ನಾವು ದಿನ ಇದೇ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗಬೇಕು. ಮಳೆಗಾಲದಲ್ಲಿ ಈ ತರಹದ ಗೊಚ್ಚೆಗಳಿಂದ ತುಂಬಿದ ಗುಂಡಿಗಳಿದ್ದು , ಕಾಲಿಟ್ಟರೆ ಜಾರು ಜೋರು ಮಳೆ ಬಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಹಾಗಾಗಿ ಶಾಲೆಗೆ ರಜೆ ಹಾಕಿ ಮನೆಯಲ್ಲಿರಬೇಕಾಗುತ್ತದೆ.
ಹೇಳಿಕೆ…..ಲೋಲಾಕ್ಷಿ ,ಅಕ್ಷಿತಾವಿದ್ಯಾರ್ಥಿನಿಯರು
ಈ ರಸ್ತೆಯಲ್ಲಿ ಪ್ರತಿದಿನ ತಿರುಗದುವುದಕ್ಕೆ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿಯ ಯಾವ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಹಾಗೂ ಹಿಂದೆ ಇದ್ದ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ದಯಮಾಡಿ ಯಾವುದಾದರೂ ಅನುದಾನದಲ್ಲಿ ನೂತನ ಶಾಸಕರು ರಸ್ತೆ ಮಾಡಿಕೊಡುವ ಮನಸ್ಸು ಮಾಡುವಂತಾಗಲಿ.
ಹೇಳಿಕೆ…..ನಂದನ್ ಗ್ರಾಮಸ್ಥರು
ಈ ರಸ್ತೆಯಲ್ಲಿಯೇ ಪ್ರತೀದಿನ ನಾವು ತೋಟಗದ್ದೆಗೆ ತಿರುಗಾಡ ಬೇಕು.ಈ ರೀತಿ ಅವಸ್ಥೆ ಇರುವ ರಸ್ತೆಯಲ್ಲಿ ಹೇಗೆ ತಿರುಗಾಡಬೇಕು? ನಾವೇ ಗ್ರಾಮಸ್ಥರು ಸೇರಿ ಹಣ ಹೊಂದಿಸಿ ಕೊಂಡು ಚರಂಡಿ ವ್ಯವಸ್ಥೆ ಈ ರಸ್ತೆಯನ್ನು ಪಕ್ಕದ ಊರಿನವರು ತುಂಬಾ ಮಂದಿ ಅವಲಂಬಿಸಿರುವ ಕಾರಣ ಈಗಲಾದರೂ ನೂತನ ಶಾಸಕರು ಈ ರಸ್ತೆಯನ್ನು ಮಾಡಿಕೊಡಲು ಮನಸ್ಸು ಮಾಡಬೇಕು.
ಹೇಳಿಕೆ…..ರಾಮಕೃಷ್ಣ ಹಡ್ಲಹಳ್ಳಿನಿವೃತ್ತ ಪಿಡಿಒ
ಈ ರಸ್ತೆ ಸುಮಾರು 12 ಮನೆ ಸೇರಿದಂತೆ ಅಕ್ಕಪಕ್ಕದ ರೈತರಿಗೆ ತೋಟ ಗದ್ದೆ ಹೋಗುವುದಕ್ಕೆ ಈ ರಸ್ತೆ ಮುಖ್ಯವಾಗಿದ್ದು ಯಾವುದೇ ಅನುದಾನದಲ್ಲಿ ಈ ರಸ್ತೆ ಮಾಡುವುದಕ್ಕೆ ಆಗಿಲ್ಲ. ಈಗಿನ ಶಾಸಕರಾದ ಸಿಮೆಂಟ್ ಮಂಜಣ್ಣನವರು ಈ ರಸ್ತೆಯನ್ನು ಮಾಡಿಕೊಡಲು ಮನಸ್ಸು ಮಾಡಬೇಕು.
ಹೇಳಿಕೆ…..ಕರಡಿಗಾಲ ಕೃಷ್ಣೇಗೌಡತಾಲೂಕ್ ಪಂಚಾಯಿತಿ ಮಾಜಿ ಉಪಾಧ್ಯಕ್ಷರು.



