
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ2021- 23ನೇ ಸಾಲಿನ ಕಾರ್ಯಕಾರಿ ಮಂಡಳಿಯ 21ನೇ ಮಾಸಿಕ ಸಭೆಯು ಹೆಚ್ ಡಿ ಪಿ ಎ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆತ್ತೂರು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ವಾರ್ಷಿಕ ವಂತಿಕೆ 30,000 ರೂಪಾಯಿಯ ಚೆಕ್ಕನ್ನು ಜಿಲ್ಲಾ ಬೆಳಗಾರರ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ರಹ್ಮಣ್ಯ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಎಚ್ ಡಿ ಪಿ ಅಧ್ಯಕ್ಷರು ಕೆ.ಎನ್ ಸುಬ್ರಹ್ಮಣ್ಯ,ಗೌರವ ಕಾರ್ಯದರ್ಶಿ ಎಮ್ .ಬಿ ರಾಜೀವ್.,ಖಜಾಂಚಿ ಚಂದ್ರಶೇಖರ್ ,ಜಂಟಿ ಕಾರ್ಯದರ್ಶಿ ಮೀರ ಆಲಿ ರಾಜ್ವಿ, ಹಾಗೂ ಹೆತ್ತೂರು ಹೋಬಳಿಯ ಬೆಳೆಗಾರ ಸಂಘದ ಅಧ್ಯಕ್ಷರಾದ ದೇವರಾಜು, ಕಾರ್ಯದರ್ಶಿಯಾದ ಉದಯ್, ಜಿಲ್ಲಾ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಕರಡಿಗಾಲ ಕೃಷ್ಣೇಗೌಡ, ಉಪಾಧ್ಯಕ್ಷರಾದ ಶ್ರೀಮತಿ ನೇತ್ರ ಸುರೇಶ್, ಖಜಂಚಿ ಮಧು, ವಳವಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ಚಿನ್ನಹಳ್ಳಿ ಬಾಲು, ವಣಗೂರು ಬೆಳೆಗಾರ ಸಂಘದ ಅಧ್ಯಕ್ಷರಾದ ವಸಂತ್ ಇದ್ದರು.
