
ಸಕಲೇಶಪುರ : ಸಕಲೇಶಪುರ ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಇಂದು ಸಕಲೇಶಪುರದ ರೈಲ್ವೆ ಆಸ್ಪತ್ರೆಯಲ್ಲಿ ನೆಡೆಯಿತ್ತು.
ಜಿಲ್ಲಾ ಆಸ್ಪತ್ರೆ ಹಾಸನ ಹಾಗೂ ಸಕಲೇಶಪುರ ರೈಲ್ವೆ ಇಲಾಖೆ ಆಸ್ಪತ್ರೆ ವತಿಯಿಂದ ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ , ಕಾರ್ಮಿಕರಿಗೆ ಬಿ. ಪಿ. ಶುಗರ್ , ರಕ್ತದೂತ್ತಡ ,ಹೃದಯ ಸಂಬಂಧ ಕಾಯಿಲೆ ತಾಪಾಸಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯ 45 ಕ್ಕೂ ಹೆಚ್ಚು ಜನ ರಕ್ತ ದಾನ ಮಾಡಿದರು .ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ವೈದಾಧಿಕಾರಿ ಡಾ. ಅಕ್ಷತಾ. ವಿಶ್ವನಾಥ್ .ಮಹೇಶ್.ಜಿಲ್ಲಾ ಆಷ್ಪತ್ರೆಯ ಅಧಿಕಾರಿಗಳು ರೈಲ್ವೆ ಸಿಬ್ಬಂದಿಗಳು ಹಾಜರಿದ್ದರು.



