
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರದಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮಲೆನಾಡಿನ ಭಾಗದಲ್ಲಿನ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಭಾಗದಲ್ಲಿ ಕಾಡೆಮ್ಮೆ, ಕಾಡುಕೋಣಗಳ ಹಾವಳಿಯೂ ಸಹ ಹೆಚ್ಚಾಗಿದ್ದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಜೊತೆಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಸಹಾಯಧನ ನೀಡುವಂತೆ ಬೇಡಿಕೆ ಸಲ್ಲಿಸಲಾಯಿತು.
ಹಾಸನ ಜಿಲ್ಲೆಯ ಆಲೂರು ಬೇಲೂರು ಸಕಲೇಶಪುರ ಮತ್ತು ಅರಕಲಗೂಡು ತಾಲೂಕಿನ ಎಲ್ಲಾ ಕಾಫಿ ಬೆಳೆಗಾರರಿಗೂ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯ ಧನ ನೀಡುವುದಾಗಿ ಭರವಸೆ ನೀಡಿರುತ್ತಾರೆ .ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಂತೆ ಕಾಡಾನೆ ಬೆಳೆ ನಷ್ಟಕ್ಕೆ ಕಾಡಾನೆ ಬೆಳೆ ನಷ್ಟ ಪರಿಹಾರ ವಿಮೆಯನ್ನು ಜಾರಿಗೆ ತರುವಂತೆ ಬೇಡಿಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ರಹ್ಮಣ್ಯ , ಗೌರವ ಕಾರ್ಯದರ್ಶಿಗಳಾದ ಎಂ. ಬಿ ರಾಜೀವ್ ಗೌಡ , ಖಜಾಂಚಿಗಳಾದ ಎಂ ಎಸ್ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ ಪಿ ಕೃಷ್ಣೇಗೌಡ , ನಿರ್ದೇಶಕ ಎನ್ ಈ ಸೋಮಶೇಖರ್ ಹಾಗೂ ಎಚ್.ಎಂ ರಮೇಶ್ , ಕಸಬಾ ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷರಾದ ಆರ್ ಎಂ ಚಂದ್ರಶೇಖರ್ , ಗೌರವ ಕಾರ್ಯದರ್ಶಿ ಬಿ ಎಂ ಮದನ್ ಕುಮಾರ್ ,ಉಪಾಧ್ಯಕ್ಷ ಕೆ. ವಿ ಮೇಘರಾಜ್ , ಸಂಘಟನಾ ಕಾರ್ಯದರ್ಶಿ ವಿಲ್ಫಿ ಡಿಸೋಜಾ ಹಾಜರಿದ್ದರು.
