
ದೇಶದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ.
ಹಾಸನ : ದೇಶದಲ್ಲಿ 2024ರ ಯುಗಾದಿ ವೇಳೆಗೆ ಮತ್ತೊಂದು ದುರ್ಘಟನೆ ಸಂಭವಿಸುತ್ತದೆ.ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದೆ. ಆಳುವವರು ಎಚ್ಚರ ವಹಿಸಿದರೆ ಅದನ್ನು ತಪ್ಪಿಸಬಹುದು ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಅವರು, ” ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ. ಅಲ್ಲದೇ, 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ.
ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ದುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೇ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಆಧ್ಯಾತ್ಮಿಕವಾದ ಚಿಂತನೆ ನಮ್ಮಲ್ಲಿರಬೇಕು ” ಎಂದರು.
