ಸಕಲೇಶಪುರ.ತಾಲ್ಲೂಕಿನ ಹಾನುಬಾಳು ಹೋಬಳಿಯಲ್ಲಿ ಇಂದು ನೂತನವಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅದ್ಯಕ್ಷ ರಮೇಶ್ ಪೂಜಾರಿ ಮಾತನಾಡಿ ನಾವು ಈ ಹಿಂದೆ ತಾಲ್ಲೂಕು ಮಟ್ಟದಲ್ಲಿ ಹಾಗೂ ಕೆಲವು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಘಟಕಗಳು ಇದ್ದವು , ನಮ್ಮ ಸಂಘಟನೆಯ ಶಕ್ತಿಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ಎಲ್ಲಾ ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಘಟಕಗಳನ್ನು ರಚನೆ ಮಾಡುವ ಮೂಲಕ. ಕನ್ನಡ ಪರವಾದ ಹಾಗೂ ಸಾಮಾಜಿಕ ಕೆಲಸ ಮಾಡುವ ಉದ್ದೇಶದಿಂದ ಇಂದು ಹಾನುಬಾಳು ಘಟಕದ ಉದ್ಘಾಟನೆ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಕರವೇ ಘಟಕಗಳನ್ನು ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.

ಹಾನುಬಾಳು ಘಟಕದ ಉದ್ಘಾಟನೆ ಮಾಡಿದ ಬಳಿಕ ಹಾನುಬಾಳು ಘಟಕದ ಅಧ್ಯಕ್ಷರಾಗಿ ನಾಗೇಶ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಗೌರವಾಧ್ಯಕ್ಷರಾದ ಬಸವರಾಜು ಬೆಳಗೊಡು , ಪ್ರಧಾನ ಕಾರ್ಯದರ್ಶಿ ರವಿ ಅಗ್ನಿ, ಹಾನುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ, ಹಿರಿಯರಾದ ಭಾಸ್ಕರ್ , ಕರವೇ ನಗರ ಕಾರ್ಯದರ್ಶಿ ಶರಣ್, ಆಚಂಗಿ ಘಟಕ ಅಧ್ಯಕ್ಷ ಇಬ್ರಾಹಿಂ, ಕ್ಯಾಮನಹಳ್ಳಿ ಘಟಕ ಅಧ್ಯಕ್ಷ ಗೋಪಿ , ನಾಗೇಶ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *